ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ ➤ಮಾರುಕಟ್ಟೆ ಮೌಲ್ಯ ನಿಗದಿ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.10. ಕೇಂದ್ರೀಯ ಉಪನೋಂದಣಿ ಕಚೇರಿ, ಮಂಗಳೂರು ನಗರದ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾಪನ ಉಪಸಮಿತಿಯ ಆಗಸ್ಟ್ 31 ರಂದು ನಡೆದ ಸಭೆಯ ನಡವಳಿಯಲ್ಲಿ 2019ನೇ ಸಾಲಿನಲ್ಲಿ ಹೊಸ/ಹಳೆಯ ಬಿಟ್ಟು ಹೋದ ಅಪಾರ್ಟ್‍ಮೆಂಟ್‍ಗಳ ಮಾರುಕಟ್ಟೆ ಮೌಲ್ಯವನ್ನು ನಿಗಧಿ ಪಡಿಸಿ ಸಂಬಂಧಪಟ್ಟ ಕಚೇರಿಯಲ್ಲಿ ಸಾರ್ವಜನಿಕ ಆಕ್ಷೇಪಣೆಗಳಿಗಾಗಿ ಈಗಾಗಲೇ ಪ್ರಕಟಗೊಳಿಸಲಾಗಿದೆ.

ಸಾರ್ವಜನಿಕರು ಯಾವುದೇ ಆಕ್ಷೇಪನೆಗಳಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಹದಿನೈದು ದಿವಸದೊಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಬೇಕೆಂದು ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಉಪ ನೋಂದಣಾಧಿಕಾರಿ ಸ್ಥಿರ ಸ್ವತ್ತುಗಳ ಮೌಲ್ಯಮಾಪನ ಉಪಸಮಿತಿ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Scroll to Top