ಸೆ: 18ರಂದು ಕಡಬದಲ್ಲಿ ಲೋಕಾಯುಕ್ತ ಅಹವಾಲು ಸ್ವೀಕಾರ

(ನ್ಯೂಸ್ ಕಡಬ) newskadaba.com ಕಡಬ,ಸಪ್ಟೆಂಬರ್.9.ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇತರ ಆದೇಶದಂತೆ ಮಂಗಳೂರು ಲೋಕಾಯುಕ್ತ ಪೋಲೀಸ್ ಅದೀಕ್ಷಕರಿಂದ ಕಡಬ ಅಂಬೇಡ್ಕರ್ ಭವನದಲ್ಲಿ ಸೆ.18ರಂದು ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ನಡೆಯಲಿದೆ.

ಸಾರ್ವಜನಿಕರು ತಮಗೆ ಸಮಸ್ಯೆಗಳಿದ್ದರೆ ಸದ್ರಿ ಸಭೆಯಲ್ಲಿ ಹಾಜರಿದ್ದು ತ್ರಿಪ್ರತಿಗಳಲ್ಲಿ ಅಹವಾಲು ಅರ್ಜಿ ಸಲ್ಲಿಸಬೇಕಾಗಿ ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್‍ರವರು ತಿಳಿಸಿದ್ದಾರೆ.ಕಡಬ ತಾಲೂಕಿನ ಯಾವುಧೇ ಅಧಿಕಾರಿಗಳಿಂದ ತಮಗೆ ಆಗಬೇಕಾದ ಕೆಲಸದಲ್ಲಿ ವಿಳಂಬವೇನಾದರೂ ಆಗಿದ್ದರೆ, ಅಥವಾ ಅಧಿಕಾರಿಗಳು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವ್ಯರ್ಥಾ ಸತಾಯಿಸಿದ್ದರೆ ಅಥವಾ ಇನ್ಯಾವುದೇ ರೀತಿಯಲ್ಲಿ ದುರಾಡಳಿತದಲ್ಲಿ ತೊಡಗಿದ್ದರೆ. ತೊಂದರೆಗೊಳಗಾದ ಸಾರ್ವಜನಿಕರು ದಿನಾಂಕ 18ರಂದು ನಡೆಯುವ ಸಾರ್ವಜನಿಕರು ಕುಂದುಕೊರತೆಗಳ ಸಭೆಯಲ್ಲಿ ಸೂಕ್ತ ದಾಖಲೆ ಒದಗಿಸಿ ಅರ್ಜಿಸಲ್ಲಿಸಬಹುದೆಂದು ತಿಳಿಸಿದ್ದಾರೆ.

Also Read  ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟರ್ ಪಲ್ಟಿ, ಸವಾರೆ ತಂದೆ ಮೃತ್ಯು ➤ ಮದುವೆ ಮನೆಯಲ್ಲಿ ಸೂತಕದ ಛಾಯೆ

error: Content is protected !!
Scroll to Top