(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.9.ಕೇಂದ್ರ ಸರ್ಕಾರವು ಬೀದಿ ವ್ಯಾಪಾರಸ್ಥರ ಕುರಿತು ರಾಷ್ಟ್ರೀಯ ನೀತಿಯನ್ನು ಹೊರಡಿಸಿದ್ದು, ಸರ್ವೋಚ್ಛ ನ್ಯಾಯಾಲಯವು ಸಹ ಬೀದಿ ವ್ಯಾಪಾರಸ್ಥರ ನೀತಿಯನ್ನು ಅನುಷ್ಟಾನಗೊಳಿಸಲು ಆದೇಶವನ್ನು ಹೊರಡಿಸಿರುತ್ತದೆ.
ಅದೇ ರೀತಿ ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯವು “ಬೀದಿ ವ್ಯಾಪಾರಸ್ಥರ ಸಂರಕ್ಷಣೆ, ಜೀವನೋಪಾಯ ಮತ್ತು ನಿಯಂತ್ರಣ ಕಾಯ್ದೆ 2014ನ್ನು ಹಾಗೂ ಕರ್ನಾಟಕ ಸರ್ಕಾರವು “ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ನಿಯಮ ಜಾರಿಗೆ ತಂದಿದೆ.ಈಗಾಗಲೇ ಮಂಗಳೂರು ಮಹಾನಗರಪಾಲಿಕೆಯಲ್ಲಿ “ಪಟ್ಟಣ ವ್ಯಾಪಾರ ಸಮಿತಿ”ಗೆ ಚುನಾವಣೆಯ ಮುಖಾಂತರ ಸದಸ್ಯರುಗಳನ್ನು ಆಯ್ಕೆ ಮಾಡಬೇಕಾಗಿದ್ದು, ಅದಕ್ಕೆ ಸಂಬಂಧಿಸಿದ ಬೀದಿ ವ್ಯಾಪಾರಸ್ಥರ ಮತದಾನ ಪಟ್ಟಿಯನ್ನು ತಯಾರಿಸಲಾಗಿರುತ್ತದೆ.
ತಯಾರಿಸಲಾಗಿರುವ “ಬೀದಿ ಬದಿ ವ್ಯಾಪಾರಸ್ಥರ ಪಟ್ಟಿ”ಯನ್ನು ಸಾರ್ವಜನಿಕರ ಮಾಹಿತಿಗಾಗಿ ಮಂಗಳೂರು ಮಹಾನಗರಪಾಲಿಕೆಯ ಸೂಚನಾ ಫಲಕದಲ್ಲಿ ಪ್ರಚುರ ಪಡಿಸಲಾಗಿರುತ್ತದೆ. ಪ್ರ್ರಚುರ ಪಡಿಸಿರುವ ಪಟ್ಟಿಯಲ್ಲಿ ಆಕ್ಷೇಪಣೆ ಇದ್ದಲ್ಲಿ ಸೆಪ್ಟಂಬರ್ 22ರಂದು ಸಂಜೆ 5:30 ಗಂಟೆಯೊಳಗಡೆ ಮಂಗಳೂರು ಮಹಾನಗರಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದಲ್ಲಿ ಸಲ್ಲಿಸುವಂತೆ ಆಯುಕ್ತರು ಮಂಗಳೂರು ಮಹಾನಗರಪಾಲಿಕೆ ಇವರ ಪ್ರಕಟಣೆ ತಿಳಿಸಿದೆ.