2019-20ನೇ ಸಾಲಿಗೆ ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನದಡಿ ಕೌಶಲ್ಯ ಅಭಿವೃದ್ಧಿ ತರಬೇತಿ ಮೇಳ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.9.2019-20ನೇ ಸಾಲಿಗೆ ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನದಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮಾತ್ರ ಕನಿಷ್ಠ 800 ಹಾಸಿಗೆಯುಳ್ಳ ಎನ್.ಎ.ಬಿ.ಹೆಚ್ ಮಾನ್ಯತೆ ಪಡೆದಿರುವ ಆಸ್ಪತ್ರೆಗಳಲ್ಲಿ ಕನಿಷ್ಠ 75 ಶೇಕಡಾ ಹುದ್ದೆಗಳನ್ನು ಮೀಸಲಿರಿಸುವ ಭರವಸೆಯ ಮೇರೆಗೆ ಕೌಶಲ್ಯ ಅಬಿವೃದ್ದಿ ತರಬೇತಿ ಮೇಳವನ್ನು ಆಯೋಜಿಸಲಾಗಿದೆ.

ಸೆಪ್ಟೆಂಬರ್ 20 ರಂದು ಬೆಳಿಗ್ಗೆ 10.30 ಗಂಟೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಸಭಾಂಗಣ, ಪಿಡಬ್ಲ್ಯೂಡಿ ಕಟ್ಟಡ, ಮಂಗಳೂರು ಇಲ್ಲಿ ಏರ್ಪಡಿಸಲಾಗಿದೆ.
ಆಸಕ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಸದರಿ ಮೇಳಕ್ಕೆ ಹಾಜರಾಗಿ ನಿಗದಿತ ಅರ್ಜಿಯನ್ನು ಪಡೆದು ಅಲ್ಲಿಯೇ ಭರ್ತಿ ಮಾಡಿ ನೀಡಬೇಕು. ತರಬೇತಿಯು ಸಂಪೂರ್ಣವಾಗಿ ಉಚಿತವಾಗಿದೆ. ತರಬೇತಿ ಸಮಯದಲ್ಲಿ ಉಚಿತ ಊಟ, ವಸತಿ ಸೌಲಭ್ಯಗಳನ್ನು ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ, ಮಂಗಳೂರು ದೂರವಾಣಿ ಸಂಖ್ಯೆ: 824-2423672 ಎಂದು ಪ್ರಕಟಣೆ ತಿಳಿಸಿದೆ.

Also Read  ಬ್ಯಾಂಕ್ ಆಫ್ ಬರೋಡಾದಿಂದ ಕುಕ್ಕೇ ಶ್ರೀ ದೇವಳಕ್ಕೆ ಕಂಪ್ಯೂಟರ್ ಕೊಡುಗೆ

error: Content is protected !!
Scroll to Top