ಮಹಿಳೆ ಕಾಣೆಯಾಗಿದ್ದಾರೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.9.ಉಪ್ಪಿನಂಗಡಿಯ ಸಿಟಿ ಲ್ಯಾಂಡ್ ಹೋಟೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದ ರಜನಿ( 45) ಎಂಬವರು ಆಗಸ್ಟ್ 17 ರಂದು ಬೆಳಿಗ್ಗೆ 10 ಗಂಟೆಯಿಂದ ಕಾಣೆಯಾಗಿರುತ್ತಾರೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಣೆಯಾದ ಮಹಿಳೆಯ ಚಹರೆ ಇಂತಿವೆ: ಎತ್ತರ 5.2 ಅಡಿ, ಗೋದಿ ಮೈಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ, ತುಳು ಭಾಷೆ ಮಾತಾಡುತ್ತಾರೆ. ಈ ಚಹರೆಯುಳ್ಳ ಮಹಿಳೆಯ ಪತ್ತೆಯಾದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆ, ದೂರಾವಾಣಿ ಸಂಖ್ಯೆ 08251-251055 ಜಿಲ್ಲಾ ನಿಸ್ತಂತು ವಿಭಾಗ 0824-2220500 ಮಾಹಿತಿ ನೀಡಬೇಕೆಂದು ಠಾಣಾಧಿಕಾರಿ, ಉಪ್ಪಿನಂಗಡಿ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top