ಪರಿಶಿಷ್ಟ ಪಂಗಡದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.9.2018-19ನೇ ಸಾಲಿನಲ್ಲಿ ಭಾರತ ಸಂವಿಧಾನ ಅನುಚ್ಛೇಧ 275(1)ರಡಿ ಹಾಗೂ ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ಪಂಗಡವರ ಅಭಿವೃದ್ಧಿ ಕಾರ್ಯಕ್ರಮಗಳಡಿ ಫಲಾನುಭವಿ ಆಧಾರಿತ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.

ಹೈನುಗಾರಿಕೆ, ಹಸು/ಎಮ್ಮೆ ಕರು ಘಟಕ, ಕುರಿ/ಮೇಕೆ ಘಟಕ, ಸರಕು ಸಾಗಾಣಿಕೆ ವಾಹನ, ಹಂದಿ ಸಾಕಾಣಿಕೆ ಸೌಲಭ್ಯ ಪಡೆಯಲು ಷರತ್ತಿಗೊಳಪಟ್ಟು ಆಸಕ್ತ ಅರ್ಜಿದಾರರಿಂದ ನಿಗಧಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.ಆದ್ದರಿಂದ ಮೂಲನಿವಾಸಿ ಮತ್ತು ಅರಣ್ಯ ಅವಲಂಭಿತ ಪರಿಶಿಷ್ಟ ವರ್ಗದವರು ನಿಗಧಿತ ನಮೂನೆಯ ಅರ್ಜಿಯನ್ನು ಸಹಾಯಕ ನಿರ್ದೇಶಕರು, (ಗ್ರೇಡ್-1) ಸಮಾಜ ಕಲ್ಯಾಣ ಇಲಾಖೆ, ರಸಿಕ್ ಚೇಂಬರ್ಸ್, 3ನೇ ಮಹಡಿ, ಮಾರ್ಕೆಟ್ ರೋಡ್, ಮಂಗಳೂರು ಈ ಕಚೇರಿಯಿಂದ ಪಡೆದು, ಅರ್ಜಿಯನ್ನು ಭರ್ತಿ ಮಾಡಿ ಸೂಕ್ತ ದಾಖಲಾತಿಗೊಂದಿಗೆ ಸೆಪ್ಟಂಬರ್ 16ರೊಳಗಾಗಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಷರತ್ತುಗಳು ಇಂತಿವೆ: ಅರ್ಜಿದಾರರು ಕರ್ನಾಟಕದವರಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು, ಹೈನುಗಾರಿಕೆ, ಹಸು/ಎಮ್ಮೆ ಕರು ಘಟಕ, ಕುರಿ/ಮೇಕೆ ಘಟಕ, ಹಂದಿ ಸಾಕಾಣಿಕೆ ಸೌಲಭ್ಯ ಪಡೆಯುವ ಅರ್ಜಿದಾರರು ವಯಸ್ಸು 18 ರಿಂದ 60 ವರ್ಷದೊಳಗಿರಬೇಕು, ಅರ್ಜಿದಾರರ ವಾರ್ಷಿಕ ಆದಾಯ ರೂ.1.50 ಲಕ್ಷಗಳ ಒಳಗಡೆ ಇರಬೇಕು, ಅರ್ಜಿದಾರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಸರ್ಕಾರಿ ನೌಕರಿಯಲ್ಲಿರಬಾರದು, ಅರ್ಜಿದಾರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಯಾವುದೇ ಯೋಜನೆಯಡಿ ಈ ಹಿಂದೆ ಯಾವುದೇ ಇಲಾಖೆ/ನಿಗಮದಿಂದ ಸೌಲಭ್ಯವನ್ನು ಪಡೆದಿರಬಾರದು, ಪಡೆದ ಘಟಕ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಪ್ರಮಾಣ ಪತ್ರ ನೀಡಬೇಕು, ಅರ್ಜಿದಾರರು ಬಿಪಿಎಲ್ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು.

Also Read  ರಕ್ಷಕ ಶಿಕ್ಷಕ ಸಂಘದ ಸಭೆ ➤ ಜನತಾ ಪ್ರೌಢಶಾಲೆ ಅಡ್ಯನಡ್ಕ

ಹೈನುಗಾರಿಕೆ ಮತ್ತು ಕುರಿ, ಮೇಕೆ ಘಟಕಗಳನ್ನು ಮಹಿಳೆಯವರಿಗೆ ಮಾತ್ರ ನೀಡಲಾಗುವುದು, ಸರಕು ಸಾಗಾಣಿಕೆ ವಾಹನ ಪಡೆಯುವ ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದೊಳಗಿರಬೇಕು, ಸರಕು ಸಾಗಾಣಿಕೆ ವಾಹನ ಪಡೆಯುವ ಅರ್ಜಿದಾರರು ಡ್ರೈವಿಂಗ್ ಲೈಸೆನ್ಸ್(ಲಘು/ಭಾರಿ)ಹೊಂದಿರಬೇಕು, ಸರಕು ಸಾಗಾಣಿಕೆ ವಾಹನ ಪಡೆಯುವ ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶವಾದಲ್ಲಿ ರೂ.1.50ಲಕ್ಷ ಹಾಗೂ ನಗರ ಪ್ರದೇಶವಾದಲ್ಲಿ ರೂ.2 ಲಕ್ಷ ಮಿತಿಯೊಳಗಿರಬೇಕು ಎಂದು ಸಹಾಯಕ ನಿರ್ದೇಶಕರು (ಗ್ರೇಡ್ 1) ಸಮಾಜ ಕಲ್ಯಾಣ ಇಲಾಖೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು: ಬಕ್ರೀದ್ ಸಂದರ್ಭ ಕುರ್ಬಾನಿ ➤ ಗೋಹತ್ಯೆ, ಅಕ್ರಮ ಗೋಸಾಗಾಟಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತಕ್ಕೆ ವಿಹೆಚ್ ಪಿ ನ ಆಗ್ರಹ

error: Content is protected !!
Scroll to Top