ಬೆಂಗರೆ: ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.9.ಕರ್ನಾಟಕ ಸರ್ಕಾರವು ಎಡಿಬಿ ನೆರವಿನೊಂದಿಗೆ ಮಂಗಳೂರು ನಗರಕ್ಕೆ ಕ್ವಿಮಿಪ್ ಟ್ರಾಂಚ್-2 ರಡಿಯಲ್ಲಿ ಒಳಚರಂಡಿ ಹಾಗೂ ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಸಭೆಯನ್ನು ಆಯೋಜಿಸಲಾಗಿದೆ.

ಸೆಪ್ಟಂಬರ್ 9 ರಂದು ಅಪರಾಹ್ನ 4 ಗಂಟೆಗೆ ವಾರ್ಡ್ ನಂ.60, ಬೆಂಗ್ರೆ ವಾರ್ಡ್‍ನಲ್ಲಿ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಪಡುಹೊಯ್ಗೆ ಗ್ರಾಮಸಭೆಯಲ್ಲಿ ಕೆಯುಐಡಿಎಫ್‍ಸಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಿಂದ ಆಯೋಜಿಸಲಾಗಿದೆ. ಈ ಸಭೆಗೆ ವಾರ್ಡ್‍ನ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಕಾಮಗಾರಿಗಳ ಸಮರ್ಪಕ ನಿರ್ವಹಣೆಗೆ ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಲು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

Also Read  ಕರಾವಳಿಯಲ್ಲಿ ಮುಂದುವರಿದ ಮುಂಗಾರು ಹಿನ್ನೆಲೆ ➤ ಪ್ರಾಕೃತಿಕ ವಿಕೋಪ ಉಂಟಾದಲ್ಲಿ ಪೊಲೀಸ್ ಸಹಾಯವಾಣಿ ಸಂಪರ್ಕಿಸಲು ದ.ಕ ಜಿಲ್ಲಾ ಪೊಲೀಸ್ ಮನವಿ

error: Content is protected !!
Scroll to Top