ಸೆ.12 ಇಂದ್ರಧನುಷ್ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.7.ಮಂಗಳೂರು ನಗರ ಅಧಿಕೃತ ಭಾಷಾ ಅನುಷ್ಠಾನ ಸಮಿತಿ ಹಾಗೂ ಆಕಾಶವಾಣಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಿಂದಿ ದಿನದ ಅಂಗವಾಗಿ ಇಂದ್ರಧನುಷ್ ವಿಶೇಷ ಕಾರ್ಯಕ್ರಮವು ಸೆಪ್ಟಂಬರ್ 12 ರಂದು ಸಂಜೆ 4.30 ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನ.ರಾ.ಕಾ.ಸ ಮಂಗಳೂರಿನ ಅಧ್ಯಕ್ಷೆ ಮತ್ತು ಕಾರ್ಪೊರೇಶನ್ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಪಿ.ವಿ. ಭಾರತಿ ಭಾಗವಹಿಸಲಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನ, ಬೆಂಗಳೂರು ದಕ್ಷಿಣ ವಲಯದ ಹೆಚ್ಚುವರಿ ಮಹಾನಿರ್ದೇಶಕರಾದ ಡಾ. ರಾಜ್‍ಕುಮಾರ್ ಮತ್ತು ಕಾರ್ಪೊರೇಶನ್ ಬ್ಯಾಂಕ್‍ನ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿರೂಪಾಕ್ಷ ಮಿಶ್ರಾ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಾಯಕ ನಿರ್ದೇಶಕರು ಮುಖ್ಯಸ್ತರು ಆಕಾಶವಾಣಿ ಮಂಗಳೂರು ಇಲ್ಲಿನ ಎಸ್. ಉಷಾಲತಾ ವಹಿಸಲಿದ್ದಾರೆ.

Also Read  ಬೆಳ್ತಂಗಡಿ: ಪತ್ನಿಗೆ ಕೊರೋನಾ ದೃಢ ➤ ಆಸ್ಪತ್ರೆಯ ಗೇಟ್ ಮುರಿದು ತಾಯಿ-ಮಗುವನ್ನು ಕರೆದೊಯ್ದ ಪತಿರಾಯ

error: Content is protected !!
Scroll to Top