ಅರಿವು ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.7.ಅರಿವು ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ಸಿ.ಇ.ಟಿ ಮೂಲಕ ಪ್ರವೇಶಾತಿ ಪಡೆಯುವ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಾಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2 ರ ಬಡ್ಡಿದರದಲ್ಲಿ ವಾರ್ಷಿಕವಾಗಿ ಗರಿಷ್ಟ ರೂ.1 ಲಕ್ಷಗಳವರೆಗೆ ಸಾಲ ಮಂಜೂರು ಮಾಡಲಾಗುತ್ತದೆ.

2019-20ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ/ಸಿ.ಇ.ಟಿ ಮೂಲಕ ಸೀಟು ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಹಾಗೂ ಸಿ.ಇಟಿ ಪರೀಕ್ಷೆ ಹೊರತುಪಡಿಸಿದ ಕೋರ್ಸ್‍ಗಳಲ್ಲಿ ವ್ಯಾಸಾಂಗ ಮಾಡುವ ಅರ್ಹ ವಿದ್ಯಾರ್ಥಿಗಳಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲ ಪಡೆಯ ಬಯಸುವ ಹಿಂದುಳಿದ ವರ್ಗಗಳ ಪ್ರ-1, ಪ್ರ-2ಎ, ಪ್ರ-3ಎ ಮತ್ತು ಪ್ರ-3ಬಿಗೆ, ಸೇರಿದ್ದು (ವಿಶ್ವಕರ್ಮ ಮತ್ತು ಉಪಜಾತಿಗಳು, ಅಲ್ಪಸಂಖ್ಯಾತರು ಮತ್ತು ಉಪಜಾತಿಗಳು, ಉಪ್ಪಾರ ಮತ್ತು ಉಪಜಾತಿಗಳು ಹಾಗೂ ಬೆಸ್ತ/ಅಂಬಿಗ ಮತ್ತು ಅದರ ಉಪಜಾತಿಗಳನ್ನು ಹೊರತುಪಡಿಸಿ) ವಿದ್ಯಾರ್ಥಿ ಮತ್ತು ಕುಟುಂಬದ ವಾರ್ಷಿಕ ವರಮಾನ, ರೂ.3.50 ಲಕ್ಷಗಳ ಮಿತಿಯಲ್ಲಿ ಇರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಷರತ್ತು ಮತ್ತು ನಿಬಂಧನೆಗಳು : ಪ್ರವರ್ಗ-1 ಮತ್ತು 2ಎಗೆ ಶೇ.70 ಹಾಗೂ ಪ್ರವರ್ಗ 3ಎ & 3ಬಿ ಶೇ.30ರಂತೆ ಆಯ್ಕೆ ಮಾಡಲಾಗುತ್ತದೆ. 2019-20ನೇ ಸಾಲಿಗೆ ಸರ್ಕಾರವು ಒದಗಿಸಿದ ಅನುದಾನದ ಮಿತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ವಿದ್ಯಾರ್ಥಿಯು ಒಂದೇ ಜಿಲ್ಲೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಪ್ರಸಕ್ತ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಕೋರ್ಸುಗಳ ವಿವರ ಇಂತಿವೆ : ಬಿ.ಇ(ಸಿ.ಇ.ಟಿ), ಎಂ.ಬಿ.ಬಿ.ಎಸ್, ಬಿ.ಯೂ.ಎಂ.ಎಸ್(ಸಿ.ಇ.ಟಿ), ಬಿ.ಡಿ.ಎಸ್(ಸಿ.ಇ.ಟಿ), ಬಿ.ಎ.ಎಂಎಸ್ (ಸಿ.ಇ.ಟಿ), ಬಿ.ಎಚ್.ಎಂ.ಎಸ್ (ಸಿ.ಇ.ಟಿ), ಎಂ.ಬಿ.ಎ (ಸಿ.ಇ.ಟಿ), ಎಂಟೆಕ್(ಸಿ.ಇ.ಟಿ), ಎಂ.ಇ, ಎಂ.ಡಿ, ಪಿ.ಹೆಚ್.ಡಿ, ಬಿ.ಸಿ.ಎ/ಎಂ.ಸಿ.ಎ, ಎಂ.ಎಸ್ ಅಗ್ರಿಕಲ್ಚರ್, ಬಿ.ಎಸ್.ಸಿ ನರ್ಸಿಂಗ್, ಬಿ.ಫಾರಂ/ಎಂ.ಪಾರಂ, ಬಿ.ಎಸ್.ಸಿ ಪ್ಯಾರ ಮೆಡಿಕಲ್, ಬಿ.ಎಸ್ಸಿ ಬಯೋ ಟೆಕ್ನಾಲಜಿ, ಬಿ.ಟೆಕ್, ಬಿ.ಪಿಟಿ, ಬಿ.ವಿ.ಎಸ್.ಸಿ/ಎಂ.ವಿ.ಎಸ್.ಸಿ, ಜಿ.ಎನ್.ಎಂ, ಬಿ.ಹೆಚ್.ಎಮ್, ಎಂ.ಡಿ.ಎಸ್, ಎಂ.ಎಸ್.ಡಬ್ಲ್ಯೂ, ಎಲ್.ಎಲ್.ಎಂ, ಎಂ.ಎಫ್.ಎ, ಎಂ.ಎಸ್.ಸಿ ಬಯೋ ಟೆಕ್ನಾಲಜಿ, ಮತ್ತು ಎಂ.ಎಸ್.ಸಿ ಎಜಿ.

Also Read  ಕರ್ನಾಟಕದ ಬೀಚ್ ಗಳಲ್ಲಿ ಟೆಂಟ್-ಮದ್ಯಪಾನ ಪಾರ್ಟಿಗೆ ಅವಕಾಶ-ಶೀಘ್ರ ತೀರ್ಮಾನ

ಸಾಲ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಸಕ್ಷಮ ಪ್ರಾಧಿಕಾರ ನೀಡುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ, ಆಧಾರ್ ಕಾರ್ಡ್/ ಚುಣಾವಣಾ ಗುರುತಿನ ಚೀಟಿ, ಎಸ್,ಎಸ್,ಎಲ್,ಸಿ ಅಂಕಪಟ್ಟಿ, ಸಿ.ಇ.ಟಿ/ನೀಟ್ ಪ್ರವೇಶ ಪರೀಕ್ಷೆ ಅಡ್ಮಿಷನ್ ಟಿಕೆಟ್, ಸ್ಟಡಿ ಸರ್ಟಿಫಿಕೇಟ್ ಮತ್ತು ಫೀ ಸ್ಟ್ರಕ್ಚರ್ ಮೂಲ ಪ್ರತಿ, ವಿದ್ಯಾರ್ಥಿಯು ಹೊಂದಿರುವ ಬ್ಯಾಂಕ್ ಪಾಸ್ ಪುಸ್ತಕದ ದೃಡೀಕೃತ ಪ್ರತಿ ದಾಖಲೆಗಳೊಂದಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿ, ರೇಡಿಯೋ ಪಾರ್ಕ್ ಬಳಿ, ಉರ್ವಸ್ಟೋರ್, ಮಂಗಳೂರು ಇಲ್ಲಿಗೆ ಸೆಪ್ಟಂಬರ್ 16ರೊಳಗೆ ಅರ್ಜಿ ಸಲ್ಲಿಸಬಹುದೆಂದು ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

Also Read  ಏಕಲವ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

error: Content is protected !!
Scroll to Top