ಮಂಗಳೂರು-ಉಡುಪಿ ಹಾಗೂ ಉಡುಪಿ-ಕುಂದಾಪುರ ➤ ಕೆಎಸ್ಆರ್ಟಿಸಿ ಬಸ್ ಪಾಸು ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.7.ಕರಾರಸಾನಿಗಮವು ಪ್ರತಿದಿನ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಅತೀ ಕಡಿಮೆ ಪ್ರಯಾಣ ದರದಲ್ಲಿ ಮಂಗಳೂರು-ಉಡುಪಿ ಹಾಗೂ ಉಡುಪಿ-ಕುಂದಾಪುರ ಮಾರ್ಗಗಳಲ್ಲಿ ಕಾರ್ಯಚರಿಸುತ್ತಿರುವ ವೇಗದೂತ ಸಾರಿಗೆಗಳಲ್ಲಿ (ಪ್ರತಿದಿನ ಎರಡು ಟ್ರಿಪ್, ಹೋಗುವ ಹಾಗೂ ಬರುವ) ದೈನಂದಿನ ಮತ್ತು ಮಾಸಿಕ ಬಸ್ಸು ಪಾಸುಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

Gems

ಸದರಿ ದೈನಂದಿನ ಹಾಗೂ ಮಾಸಿಕ ಬಸ್ಸು ಪಾಸುಗಳ ದರಗಳು ಇಂತಿವೆ : ಮಾರ್ಗ ಮಂಗಳೂರು- ಉಡುಪಿ ದೈನಂದಿನ ಪಾಸು ರೂ.100/-, ಮಾಸಿಕ ಪಾಸು ರೂ. 2000/-, ಮಾರ್ಗ ಉಡುಪಿ-ಕುಂದಾಪುರ ದೈನಂದಿನ ಪಾಸು ರೂ.70/-, ಮಾಸಿಕ ಪಾಸು ರೂ 1400/-. ಸಾರ್ವಜನಿಕ ಪ್ರಯಾಣಿಕರು ಸದರಿ ಸೇವೆಗಳ ಸದುಪಯೋಪಗವನ್ನು ಪಡೆದುಕೊಳ್ಳಬೇಕೆಂದು ವಿಭಾಗೀಯ ನಿಯಂತ್ರಣಾಧಿಕಾರಿ ಕರಾರಸಾಸಂ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಛತ್ತೀಸ್ಗಢ: ಎನ್ಕೌಂಟರ್ನಲ್ಲಿ ಹತ್ಯೆಯಾದ ನಕ್ಸಲೀಯರ ಸಂಖ್ಯೆ 31ಕ್ಕೆ ಏರಿಕೆ

error: Content is protected !!
Scroll to Top