(ನ್ಯೂಸ್ ಕಡಬ) newskadaba.com ಕಡಬ,ಸಪ್ಟೆಂಬರ್.6.ಡಾ/ ಸರ್ವಪಲ್ಲಿ ರಾಧಾಕೃಷ್ಣ ಅವರ 131 ನೇ ಜನ್ಮ ದಿನದ ಅಂಗವಾಗಿ ಕಡಬ ತಾಲೂಕಿನ,ಶಿಕ್ಷಕ ಸೇವೆಯಿಂದ ವಿಶ್ರಾಂತಿಯಲ್ಲಿ ರುವ ಶ್ರೀಮತಿ ಸುಶೀಲ ಪಿ ಇವರನ್ನು ಸನ್ಮಾನಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ದೇಶದೆಲ್ಲಾ ವಿಜೃಂಭಣೆಯಿಂದ ಆಚರಿಸುವ ಹಬ್ಬ ಯಾವ ವ್ಯಕ್ತಿಯೇ ಆಗಲಿ ಯಾವುದೇ ಹುದ್ದೆಗೆ ಹೋದರೂ ಕೂಡ ತಮ್ಮ ಗುರುವನ್ನು ಮರೆಯಾಬಾರದು ಮತ್ತು ನಮ್ಮ ದೇಶದ ಉನ್ನತಿಗೆ ಗುರುವೇ ಸಾಕ್ಷಿ, ಶಿಕ್ಷಕರ ವೃತ್ತಿಯೇ ಶೇಷ್ಠ ವೃತ್ತಿ ಎಂದು ಶ್ರೀಮತಿ ಸುಶೀಲ ಪಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದರು.ಭಗವಂತನ ಇರುವಿಕೆಯನ್ನು ತೋರಿಸಿ ಕೊಟ್ಟವರು ಗುರು. ಪ್ರತಿ ದಿನದ ಚಟುವಟಿಕೆಯಲ್ಲಿಯೂ ನಾವು ಗುರುವನ್ನು ಕಾಣಬಹುದು.
ವೃತ್ತಿಯಿಂದ ನಿವೃತ್ತರಾದರು ಕೂಡ ಅವರು ಗುರುವಾಗಿಯೇ ಇರುವರು, ಗುರುವಿಗೆ ಮಾತ್ರ ಈ ದೇಶದಲ್ಲಿ ಒಳ್ಳೆಯ ಗೌರವ ಸಿಗಲು ಸಾಧ್ಯ ಎಂದು ತಾಲೂಕು ಪಂಚಾಯತಿನ ಮಾಜಿ ಅಧ್ಯಕ್ಷರು ಆದ ಶ್ರೀಮತಿ ಪುಲಸ್ಯ ರೈ ನುಡಿದರು.ಸಂಸ್ಥೆಯ ಎಲ್ಲಾ ಶಿಕ್ಷಕ ಬಾಂಧವರನ್ನು ವಿದ್ಯಾರ್ಥಿಗಳು ಸ್ಮರಣಿಕೆ ನೀಡಿ ಗೌರವಿಸಿದರು. ಮತ್ತು ವಿವಿಧ ಆಟೋಟ ಸ್ಫರ್ದೆಗಳನ್ನು ಅಯೋಜಿಸಲಾಯಿತು. ಮುಖ್ಯ ಗುರುಗಳು ಶ್ರೀಮಾನ್ ಮಾಧವ ಕೋಲ್ಪೆ ಸ್ವಾಗತಿಸಿದರು. ಶ್ರೀಮತಿ ಮೀನಾ ಕೆ ವಂದಿಸಿದರು. ಶ್ರೀಮಾನ್ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.