➤➤Big Breaking News➤➤ ಹಿಂ.ಜಾ.ವೇ. ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮೇರ್ಲ ಕೊಲೆ ಪ್ರಕರಣ ➤ ಆರೋಪಿಗಳಾದ ಕಿರಣ್ ರೈ, ಚರಣ್ ರೈ, ಪ್ರೀತೇಶ್ ಶೆಟ್ಟಿ ಹಾಗೂ ಆರೋಪಿಗಳ ಆಶ್ರಯದಾತ ಅತ್ತಾವರ ನಿವಾಸಿ ಸ್ಡೀವನ್ ಮೊಂತೆರೋ ಎಂಬಾತನ ಬಂಧನ.

(ನ್ಯೂಸ್ ಕಡಬ) newskadaba.com ಪುತ್ತೂರು, ಸಪ್ಟೆಂಬರ್.5.  ಸೆ.3ರಂದು ರಾತ್ರಿ ಸಂಪ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಹಿಂ.ಜಾ.ವೇ ತಾಲೂಕು ಪ್ರಧಾನ ಕಾರ್ಯದರ್ಶಿ ಅರ್ಯಾಪು ಮೇರ್ಲ ನಿವಾಸಿ ಕಾರ್ತಿಕ್ ಸುವರ್ಣರವರ ಭೀಕರವಾದ ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದ ಆರೋಪಿಗಳು ಪುತ್ತೂರು ಆರ್ಯಾಪು ಗ್ರಾಮದವರಾಧ ಕಿರಣ್ ರೈ(36 ವರ್ಷ) ಮತ್ತು ಚರಣ್‌ರಾಜ್ ರೈ(26 ವರ್ಷ) ರವರನ್ನು ಬಂಧಿಸಲಾಗಿದೆ.

ಪ್ರಕರಣದ ಪ್ರಮುಖ ಪಾತ್ರಧಾರಿ ಆರೋಪಿ ಮಂಗಳೂರು ಉಳ್ಳಾಲಬೈಲು ನಿವಾಸಿ ಪ್ರೀತೇಶ್ ಶೆಟ್ಟಿ(28 ವರ್ಷ) ಪರಾರಿಯಾಗಿದ್ದು, ಆಗಸ್ಟ್.5 ರಂದು ಆರೋಪಿ  ಪ್ರೀತೇಶ್ ಶೆಟ್ಟಿ ಯನ್ನು ಹಾಗೂ ಆರೋಪಿಗಳಿಗೆ ಅಶ್ರಯ ನೀಡಿದ ಮೇರೆಗೆ ಮಂಗಳೂರು ಅತ್ತಾವರ ನಿವಾಸಿ ಸ್ಡೀವನ್ ಮೊಂತೆರೋ ಎಂಬಾತನನ್ನು ಮಂಗಳೂರಿನಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸೆ.5 ರಂದು ಬಂಧಿಸಿದ್ದಾರೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದೆ.

Also Read  ಜಿ-20 ಸಭೆ: ಆಶೀಶ್‌ ಸಿನ್ಹಾ ನೇತೃತ್ವದ 6 ಸದಸ್ಯರ ತಂಡ ಹಂಪಿಗೆ ಭೇಟಿ

error: Content is protected !!
Scroll to Top