ಡಿಕೆಶಿ ಬಂಧನ ಖಂಡಿಸಿ ಕಡಬದಲ್ಲಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸಪ್ಟೆಂಬರ್.5.ಮಾಜಿ ಸಚಿವ ಕಾಂಗ್ರೇಸ್ ಮುಖಂಡ ಡಿ.ಕೆ ಶಿವಕುಮಾರ್ ಅವರ ಬಂಧನವನ್ನು ಖಂಡಿಸಿ ಕಡಬ ಬ್ಲಾಕ್ ಕಾಂಗ್ರೇಸ್ ವತಿಯಿಂದ ಕಡಬ ಪೇಟೆಯಲ್ಲಿ ಕಾಂಗ್ರೇಸ್ ಕಾರ್ಯಕರ್ತರು ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದರು.


ಕಡಬ ಪಂಚಾಯತ್ ಕಟ್ಟಡದ ಬಳಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗಣೇಶ್ ಕೈಕುರೆ ಅವರ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಷಾ, ಹಾಗೂ , ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರಕಾರದ ವಿರುದ್ಧ ಮಾತನಾಡಿದ ಕಾಂಗ್ರೇಸ್ ಮುಖಂಡರು ನಮ್ಮ ನೆಚ್ಚಿನ ನಾಯಕ ಡಿ.ಕೆ ಶಿವಕುಮಾರ್ ಅವರನ್ನ ಇಡಿ ಮುಖಾಂತರ ಬಂಧಿಸುವ ಮೂಲಕ ಅಮಿತ್ ಷಾ ಹಾಗೂ ನರೇಂದ್ರ ಮೋದಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.

ಡಿ.ಕೆ ಶಿಯಂತಹ ಒಬ್ಬ ದೀಮಂತ ನಾಯಕನನ್ನು ಆಳಿದು ಕಾಂಗ್ರೇಸ್ ಪಕ್ಷವನ್ನು ತುಳಿಯುವ ಷಂಡ್ಯಾಂತರ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ದೇಶದಲ್ಲಿ ಬಿಜೆಪಿ ಆಡಳಿತ ನಡೆಸಲು ಪ್ರಾರಂಭಿಸಿದ ಬಳಿಕ ದೇಶದಲ್ಲಿ ಆರಾಜಕತೆ ಸೃಷ್ಟಿಯಾಗಿದೆ. ಪ್ರಜಾಪ್ರಭುತ್ವದ ಕಗ್ಗೋಲೆ ನಡೆಯುತ್ತಿದೆ, ನೋಟ್ ಬ್ಯಾನ್‍ನಂತಹ ಕರಾಳ ವ್ಯವಸ್ಥೆಯನ್ನು ಜಾರಿ ಮಾಡಿ ದೇಶದ ಆರ್ಥಿಕ ಪರಿಸ್ಥಿತಿ ಆಧೋೀಗತಿಗೆ ಇಳಿದಿದೆ. ದೇಶದಲ್ಲಿ ಯುವಜನತೆ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ .

Also Read  ಸುಳ್ಯ: ಬಸ್ಸಿನಿಂದಿಳಿದು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಾಘಾತ..! ➤ KSRTC ಬಸ್ ಚಾಲಕ ನಿಧನ

Gems

 

ಇದನ್ನೆಲ್ಲಾ ಮರೆಮಾಚಲು ಕೇವಲ ಕಾಂಗ್ರೇಸ್ ಹಾಗೂ ವಿರೋದ ಪಕ್ಷದ ಮುಖಂಡರುಗಳನ್ನು ಗುರಿಯಾಗಿಸಿಕೊಂಡು ಇಡಿ ಹಾಗೂ ಸಿಬಿಐ ಸಂಸ್ಥೆಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿಯವರು ಕೋಟಿಗಟ್ಟಲೆ ವಂಚನೆ ಮಾಡಿದರು ಅವರ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಕಾಂಗ್ರೇಸ್ ಪಕ್ಷವನ್ನು ಮುಗಿಸಲು ಷಡ್ಯಾಂತರ ನಡೆಸಲಾಗುತ್ತಿದೆ, ಡಿಕೆ ಶಿವಕುಮಾರ್‍ರವರು ಎಲ್ಲಾ ದಾಖಲೆಗಳನ್ನು ನೀಡಿ ವಿಚಾರಣೆಗೆ ಸ್ಪಂದಿಸಿದರು ಅವರನ್ನು ವಿನಾಃಕಾರಣ ಬಂಧನ ಮಾಡಿ ಕಾಂಗ್ರೇಸ್ ಕಾರ್ಯಕರ್ತರನ್ನು ಕೆಣಕುವ ಕೆಲವನ್ನು ಬಿಜೆಪಿ ಮಾಡುತ್ತಿದೆ ರಾಜ್ಯ ಹಾಗೂ ದೇಶದ ಜನತೆ ಇವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಬಿಜೆಪಿಯವರು ಹಿಟ್ಲರ್ ಆಡಳಿತವನ್ನು ಜನ ಕೊನೆಗಾಣಿಸಿ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವನ್ನು ಮಾಡಲಿದ್ದಾರೆ. ಕಾಂಗ್ರೇಸ್ ಪಕ್ಷ 70 ವರ್ಷದಲ್ಲಿ ಮಾಡದಿದ್ದನ್ನು ನಾವು ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಈಗ ದೇಶವನ್ನು ಕೊಲ್ಲೆ ಹೊಡೆಯುವುದಲ್ಲದೆ ಕಾಂಗ್ರೇಸ್ ಪಕ್ಷವನ್ನು ಮುಗಿಸಲು ಆಡಳಿತ ಯಂತ್ರವನ್ನು ಬಳಸಿಕೊಳ್ಳಲಾಗುತ್ತಿದೆ ಕಾಂಗ್ರೇಸ್ ಪಕ್ಷವನ್ನು ಮುಗಿಸಲು ಈ ದೇಶದಲ್ಲಿ ಯಾರಿಂದಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್, ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗಣೇಶ್ ಕೈಕುರೆ ,ಕಾಂಗ್ರೇಸ್ ಜಿಲ್ಲಾ ಉಪಾಧ್ಯಕ್ಷ ವಿಜಯ್ ಕುಮಾರ್ ರೈ ಕೆರ್ಮಾಯಿ, ನೆಲ್ಯಾಡಿ ಕ್ಷೇತ್ರದ ಜಿ.ಪಂ ಸದಸ್ಯ ಸರ್ವೋತ್ತೊಮ ಗೌಡ,ತಾ.ಪಂ ಸದಸ್ಯರಾದ ಫಝಲ್ ಕೋಡಿಂಬಾಳ , ಉಷಾ ಅಂಚನ್, ಕಡಬ ಬ್ಲಾಕ್ ಎಸ್‍ಸಿ ಘಟಕದ ಅಧ್ಯಕ್ಷ ಶಶಿಧರ ಬೊಟ್ಟಡ್ಕ, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಮತ್ತಿತರರು ಮಾತನಾಡಿದರು.

Also Read  ಕಲ್ಲಡ್ಕ ಡಾ| ಪ್ರಭಾಕರ್ ಹೆಸರಲ್ಲಿ ನಕಲಿ ಖಾತೆ - ದೂರು ದಾಖಲು

ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ ಇಲ್ಯಾಸ್, ಕಾರ್ಯದರ್ಶಿ ಸೈಮನ್ ಸಿ.ಜೆ, ಪ್ರಚಾರ ಸಮಿತಿ ಅಧ್ಯಕ್ಷ ರೋಯಿ ಅಬ್ರಹಾಂ, ತಾ.ಪಂ ಸದಸ್ಯರಾದ ಕೆ.ಟಿ ವಲ್ಸಮ್ಮ, ಆಶಾ ಲಕ್ಷ್ಮಣ್, ಕಡಬ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರ, ಕಾಂಗ್ರೇಸ್ ಮುಖಂಡರಾದ ಹನೀಫ್ ಕೆ.ಎಂ, ಅಶ್ರಫ್ ಶೇಡಿಗುಂಡಿ, ವಸಂತ ಕುಬುಲಾಡಿ, ಎ.ಎಸ್ ಶೇರಿಪ್, ತೋಮಸ್ ಇಡೆಯಾಳ, ನೀಲಾವತಿಶಿವರಾಂ, ಎಸ್.ಅಬ್ದುಲ್ ಖಾದರ್, ಸುದೀರ್ ದೇವಾಡಿಗ, ಪೈಝಲ್ ಎಸ್‍ಇಎಸ್, ಕ್ಸೇವಿಯರ್ ಬೇಬಿ, ಕೆ.ಜೆ ತೋಮಸ್, ಶಾರದಾದಿನೇಶ್, ಗಂಗಾಧರ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

error: Content is protected !!
Scroll to Top