ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಹಿಂದಿ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸಪ್ಟೆಂಬರ್.5.ಇಲ್ಲಿನ ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಸಪ್ಟಂಬರ 4 ರಂದು ಹಿಂದಿ ದಿನಾಚರಣೆಯನ್ನುಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯಕಾಲೇಜಿನ ಹಿಂದಿ ವಿಭಾಗದ ನಿವೃತ್ತ ಮುಖ್ಯಸ್ಥಡಾ. ಮುರಳೀಧರ ನಾೈಕ್ ಭಾರತಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳು ಉರುಳಿದರೂ ದೇಶದಅಧಿಕಮಂದಿ ಮಾತನಾಡುವ ಹಿಂದಿ ಭಾಷೆಯನ್ನುರಾಷ್ಟ್ರಭಾಷೆಯನ್ನಾಗಿ ಸ್ವೀಕರಿಸದೆ ಇರುವುದುಖೇದಕರ ಸಂಗತಿಎಂದರು. ಹಿಂದಿ ಭಾಷೆಜಗತ್ತಿನ ಪ್ರಮುಖ ಭಾಷೆಗಳಲ್ಲಿ ಒಂದು. ಅದು ಸಾಹಿತ್ಯಿಕವಾಗಿತುಂಬಾ ಶ್ರೀಮಂತ ಭಾಷೆ.

ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿತಷ್ಟು ನಾವು ಹೆಚ್ಚು ಪ್ರಯೋಜನ ಪಡೆಯುತ್ತೇವೆ, ವಿದ್ಯಾರ್ಥಿಗಳು ಭಾಷೆಯಅಧ್ಯಯನದಕಡೆಗೆ ಹೆಚ್ಚು ಗಮನ ನೀಡಬೇಕುಎಂದುಕರೆಯಿತ್ತರು.ಶಿಕ್ಷಕಿ ಚಿತ್ರಾಎಸ್. ಹಿಂದಿ ದಿನಾಚರಣೆಯ ಮಹತ್ವದಕುರಿತಾಗಿ ಮಾತನಾಡಿದರು. ಆರ್. ನಾಗರತ್ನಮ್ಮ ಅತಿಥಿಗಳನ್ನು ಪರಿಚಯಿಸಿದರು. ಸಾಲೊನಿ ಅತಿಥಿಗಳನ್ನು ಸ್ವಾಗತಿಸಿ, ಚಿರಂತನ ವಂದಿಸಿದರು. ಸಮಾರಂಭದಅಧ್ಯಕ್ಷತೆಯನ್ನು ಶಾಲಾ ಪ್ರಾಚಾರ್ಯೆ ವಿದ್ಯಾಕಾಮತ್ ಜಿ. ವಹಿಸಿದ್ದರು. ಶಕ್ತಿ ಎಜ್ಯುಕೇಶನ್‍ಟ್ರಸ್ಟ್‍ನ ಆಡಳಿತಾಧಿಕಾರಿ ಬೈಕಾಡಿಜನಾರ್ದನಆಚಾರ್, ಸಂಸ್ಥೆಯಅಭಿವೃದ್ಧಿಅಧಿಕಾರಿ ನಸೀಮ್ ಬಾನು, ಪ್ರಧಾನ ಸಲಹೆಗಾರರಮೇಶ್ ಕೆ. ಉಪಸ್ಥಿತರಿದ್ದರು.

Also Read  ಅಜಿಲಮೊಗರು : ಶಾಲೆಗೆ ತೆರಳುತ್ತಿದ್ದ ಮಕ್ಕಳ ಕಿಡ್ನಾಪ್ ಗೆ ಯತ್ನ..?                                 

error: Content is protected !!
Scroll to Top