(ನ್ಯೂಸ್ ಕಡಬ) newskadaba.com ಮಂಗಳೂರು, ಸಪ್ಟೆಂಬರ್.5.ಶ್ರೀನಿವಾಸ್ ವಿಶ್ವವಿದ್ಯಾಲಯದ ಪಾಂಡೇಶ್ವರ ಸಿಟಿ ಕ್ಯಾಂಪಸ್‍ನಲ್ಲಿ 2019-20ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ವಿಭಾಗದಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ. ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್‍ಕಾರ್ಯಕ್ರಮವನ್ನುಕಾಲೇಜಿನಗ್ಯಾಲರಿ ಹಾಲ್‍ನಲ್ಲಿಆಯೋಜಿಸಲಾಯಿತು.
ಕಾರ್ಯಕ್ರಮವನ್ನುಶ್ರೀನಿವಾಸ್ ವಿಶ್ವವಿದ್ಯಾಲಯದಕುಲಾಧಿಪತಿ ಸಿ.ಎ. ಎ. ರಾಘವೇಂದ್ರರಾವ್‍ರವರು ಉದ್ಘಾಟಿಸಿ, ಕ್ಯಾಂಪಸ್‍ನಲ್ಲಿದೊರಕುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಉತ್ತಮರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದರು.ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹಕುಲಾಧಿಪತಿಡಾ.ಎ. ಶ್ರೀನಿವಾಸ್‍ರಾವ್‍ರವರು ಶ್ರೀನಿವಾಸ್ ವಿಶ್ವವಿದ್ಯಾಲಯದಕಾಲೇಜಿನ ವಿಶೇಷತೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕುಲಪತಿಡಾ. ಪಿ. ಎಸ್. ಐತಾಳ್ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಮಾತನಾಡಿದರು.ಗೌರವಅತಿಥಿಯಾಗಿ ಸೋಲರೈಸರ್ ಬಿಸ್‍ನ ಸಿ.ಇ.ಓ. ಅಜಿತ್‍ಕುಮಾರ್ ಆಗಮಿಸಿದ್ದರು.ಈ ವೇಳೆ ಸಿ.ಸಿ.ಐ.ಎಸ್. ನ ಡೀನ್ ಫ್ರೊ. ಶ್ರೀಧರ್ ಆಚಾರ್ಯ, ಸಿ.ಎಸ್.ಎಸ್.ಹೆಚ್.ನ ಡೀನ್‍ಡಾ. ಲವೀನ, ಸಿ.ಎಂ.ಸಿ.ಯಡೀನ್‍ಡಾ ಶೈಲಶ್ರೀ ವಿ.ಟಿ. ಕಾಲೇಜಿನಅದ್ಯಾಪಕರು ಉಪಸ್ಥಿತರಿದ್ದರು.