ಶಕ್ತಿ ಶಿಕ್ಷಣ ಸಂಸ್ಥೆಯಿಂದಗುರುವಂದನೆ ➤ 2019 ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಸಪ್ಟೆಂಬರ್.4.ಶಕ್ತಿನಗರದ ಶಕ್ತಿ ಎಜ್ಯುಕೇಶನ್‍ಟ್ರಸ್ಟ್‍ನ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪದವಿ ಪೂರ್ವಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲಾ ಆಡಿಟೋರಿಯಂನಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಸೆಪ್ಟೆಂಬರ್ 5ರಂದು ಮಧ್ಯಾಹ್ನ 1:30ಕ್ಕೆ ಗುರುವಂದನೆ– 2019 ಕಾರ್ಯಕ್ರಮವನ್ನುಆಯೋಜಿಸಲಾಗಿದೆ.

ಪ್ರತಿ ವರ್ಷದಂತೆ ಈ ವರ್ಷವು ಶಿಕ್ಷಣ ಕ್ಲೇತ್ರದಲ್ಲಿಗಣನೀಯವಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಸಮಾಜ ಸೇವೆಯಲ್ಲಿತೊಡಗಿರುವ 5 ಜನ ಶಿಕ್ಷಕರಿಗೆ ಸನ್ಮಾನಕಾರ್ಯಕ್ರಮವನ್ನುಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಶ್ರೀಮತಿ ವಿಮಲ ಬಾಯಿ, ನಿವೃತ್ತ ಮುಖ್ಯ ಶಿಕ್ಷಕಿ ಕೆನರಾ ಹುಡುಗಿಯರ ಹೈಸ್ಕೂಲ್, ಮಂಗಳೂರು, ಶ್ರೀಮತಿ ವೀಣಾ ಬಿ. ನಿವೃತ್ತ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಾಂಧಿನಗರ, ಬಿ ಸೋಮಶೇಖರ ಶೆಟ್ಟಿ, ನಿವೃತ್ತ ಶಿಕ್ಷಕಎಸ್.ಡಿ.ಎಮ್. ಉಜಿರೆ, ಶ್ರೀ ಪಶುಪತಿ ಶಾಸ್ತ್ರಿ ನಿವೃತ್ತ ಮುಖ್ಯೋಪಾಧ್ಯಾಯರು, ಸರ್ವೋದಯ ಹೈಸ್ಕೂಲ್‍ಕಲ್ಲಮುಂಡ್ಕೂರು, ಶ್ರೀ ಗೋಪಾಲಕೃಷ್ಣ ಭಟ್ ನಿವೃತ್ತ ಶಿಕ್ಷಕರು ಸಂತ ಅಲೋಶಿಯಸ್ ಹೈಸ್ಕೂಲ್, ಮಂಗಳೂರು ಇವರಿಗೆ ಸನ್ಮಾನಿಸಲಾಗುವುದು.

Also Read  ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ

ಈ ಕಾರ್ಯಕ್ರಮದಅಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾೈಕ್ ವಹಿಸಲಿದ್ದಾರೆ. ವೇದಿಕೆಯಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾಕಾಮತ್ ಜಿ., ಶಕ್ತಿ ಪ ಪೂ ಕಾಲೇಜು ಪ್ರಾಂಶುಪಾಲರಾದ ಪ್ರಭಾಕರಜಿ.ಎಸ್, ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲೆ ನೀಮಾ ಸಕ್ಸೇನಾ, ಕಾರ್ಯದರ್ಶಿ ಸಂಜೀತ್ ನಾೈಕ್, ಆಡಳಿತಾಧಿಕಾರಿ ಬೈಕಾಡಿಜನಾರ್ದನಆಚಾರ್, ಅಭಿವೃದ್ಧಿಅಧಿಕಾರಿ, ನಸೀಂ ಬಾನು, ಪ್ರಧಾನ ಸಲಹೆಗಾರರಮೇಶ್ ಕೆ ಉಪಸ್ಥಿತರಿರುತ್ತಾರೆ.

Also Read  ಕೋವಿಡ್ ವಾರಿಯರ್ಸ್‌ಗೆ ಕಿರುಕುಳ ➤ ಜಿಲ್ಲಾಧಿಕಾರಿಗೆ ದೂರು

error: Content is protected !!
Scroll to Top