ಮಂಗಳೂರು ಫೋರಂ ಫಿಜಾ ಮಾಲ್ನಲ್ಲಿ ಸ್ವಾತಂತ್ರ್ಯ ಸಂಭ್ರಮ ಮತ್ತು ಮಕ್ಕಳ ಕೃಷ್ಣವೇಷ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಸಪ್ಟೆಂಬರ್.4.ಮಂಗಳೂರು ಫೋರಂ ಫಿಜಾ ಮಾಲ್‍ನಲ್ಲಿ ಶಕ್ತಿನಗರದ ಅರಿವು ವಿಶೇಷ ಮಕ್ಕಳ ತರಬೇತಿ ಕೇಂದ್ರ ಹಾಗೂ ಹಕುನಾ ಮಟಾಟ ಸಂಸ್ಥೆಯ ಆಯೋಜನೆಯಲ್ಲಿ ಸ್ವಾತಂತ್ರ್ಯ ಸಂಭ್ರಮ ಮತ್ತು ಮಕ್ಕಳ ಕೃಷ್ಣವೇಷ ಕಾರ್ಯಕ್ರಮ ನಡೆಯಿತು.

ಮನಪಾ ಮಾಜಿ ಮೇಯರ್ ಶಕೀಲಾ ಕಾವಾ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಡಾ. ಭರತ್ ಶೆಟ್ಟಿ ಆಗಮಿಸಿ, ಮಕ್ಕಳ ಕಾರ್ಯಕ್ರಮ ವೀಕ್ಷಿಸಿ ಶುಭ ಹಾರೈಸಿದರು. ಡಾ. ಕುಸುಮ್ ಅರಿವು ಸಂಸ್ಥೆ ನಿರ್ದೇಶಕಿ ಪೂರ್ಣಿಮಾ ಭಟ್, ಹಕುನಾ ಮಟಾಟದ ಸಂಚಾಲಕಿ ಅಂಜನಾ ಕಾಮತ್, ಶ್ರೀಪ್ರಸಾದ್, ಕಲಾ ದೀಪಕ್ ಉಪಸ್ಥಿತರಿದ್ದರು.

Also Read  ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿ ಬಂಧನ

error: Content is protected !!
Scroll to Top