ಉದರ ದರ್ಶಕ ಶಸ್ತ್ರ ಚಿಕಿತ್ಸೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸಪ್ಟೆಂಬರ್.3.ದಕ್ಷಿಣ ಕನ್ನಡ ಜಿಲ್ಲೆಯ 2019 ನೇ ಸಪ್ಟೆಂಬರ್ ತಿಂಗಳಲ್ಲಿ ಜರುಗುವ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಸೇವೆಗಳು ಇಂತಿವೆ.

ಸಪ್ಟೆಂಬರ್ 11 ರಂದು ಬೆಳಿಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್, ಸಪ್ಟೆಂಬರ್ 13 ರಂದು ಬೆಳಿಗ್ಗೆ ಸರಕಾರಿ ಆರೋಗ್ಯ ಕೇಂದ್ರ ಕಡಬ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗಂಜಿಮಠ, ಸಪ್ಟೆಂಬರ್ 17 ರಂದು ಬೆಳಿಗ್ಗೆ ಸಾರ್ವಜನಿಕ ಆಸ್ಪತ್ರೆ ಸುಳ್ಯ, ಸಪ್ಟೆಂಬರ್ 18 ರಂದು ಬೆಳಿಗ್ಗೆ ಸಾರ್ವಜನಿಕ ಆಸ್ಪತ್ರೆ ಪುತ್ತೂರು, ಸಪ್ಟೆಂಬರ್ 20 ರಂದು ಬೆಳಿಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರ ನಾಟೆಕಲ್ ಮತ್ತು ತಾಲೂಕು ಆಸ್ಪತ್ರೆ ಬಂಟ್ವಾಳ, ಸಪ್ಟೆಂಬರ್ 21 ರಂದು ಬೆಳಿಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವಿಟ್ಲ, ಮಾಣಿ.

Also Read  ಆ. 26 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಜಯಂತಿ

ಹಾಗೂ ಸಪ್ಟೆಂಬರ್ 24 ರಂದು ಬೆಳಿಗ್ಗೆ ತಾಲೂಕು ಆಸ್ಪತ್ರೆ ಬೆಳ್ತಂಗಡಿ, ಸಪ್ಟೆಂಬರ್ 27 ರಂದು ಸರ್ಕಾರಿ ಆರೋಗ್ಯ ಕೇಂದ್ರ ಮೂಡಬಿದ್ರೆಯಲ್ಲಿ ನಡೆಯಲಿದೆ. ಪ್ರತಿ ಗುರುವಾರ ಮತ್ತು ಶುಕ್ರವಾರದಂದು (ರಜಾ ದಿನ ಹೊರತುಪಡಿಸಿ) ಲೇಡಿಗೋಷನ್ ಆಸ್ಪತ್ರೆಯಲ್ಲಿ ಉದರದರ್ಶಕ ಹಾಗೂ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top