ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಸಪ್ಟೆಂಬರ್.3.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮ(ಇವಿಪಿ) ಸೆಪ್ಟಂಬರ್ 1 ರಿಂದಆರಂಭಗೊಂಡಿದ್ದು, ಅಕ್ಟೋಬರ್ 15ರವರೆಗೆ ನಡೆಯಲಿದೆ.


ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ದೋಷ, ಹೆಸರಿನಲ್ಲಿ ವ್ಯತ್ಯಾಸ, ಹೆಸರು ನಾಪತ್ತೆ, ಮೃತರ ಹೆಸರು ಮತ್ತಿತರ ದೂರುಗಳು ಬರುತ್ತಿವೆ. ಈ ಹಿನ್ನಲೆಯಲ್ಲಿ ಮತದಾರರ ಪಟ್ಟಿಯ ದೋಷಗಳನ್ನು ಸರಿಪಡಿಸಿ ಮತದಾರರ ಭಾವಚಿತ್ರ ಹಾಗೂ ವಿವರಗಳನ್ನು ಸಮರ್ಪಕವಾಗಿ ನಮೂದಿಸುವ ಕಾರ್ಯವನ್ನು ಅಭಿಯಾನ ರೂಪದಲ್ಲಿ ನಡೆಸಿ ಶುದ್ಧ ಮತದಾರರ ಪಟ್ಟಿಯನ್ನು ತಯಾರಿಸಲು ಈ ಕಾರ್ಯಕ್ರಮವನ್ನು ಚುನಾವಣಾ ಆಯೋಗ ಏರ್ಪಡಿಸಿದೆ. ಮತದಾರರಿಗೆ ಉತ್ತಮ ಸೇವೆ ನೀಡಲು ಈ ಕಾರ್ಯಕ್ರಮ ನಡೆಯಲಿದೆ.


ನಾಗರಿಕರು ಈ ಅವಧಿಯಲ್ಲಿ ಸ್ವಯಂ ಮುಂದೆ ಬಂದು ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ದೃಢೀಕರಿಸಿಕೊಳ್ಳಬಹುದು ತಮ್ಮ ಹೆಸರು ಮತ್ತು ಭಾವಚಿತ್ರದಲ್ಲಿ ಯಾವುದೇ ತಪ್ಪುಗಳಿದ್ದಲ್ಲಿ, ಕುಟುಂಬ ಸದಸ್ಯರ ವಿವರಗಳನ್ನು ಪರಿಶೀಲಿಸಲು, ಮತಗಟ್ಟೆಗಳ ವಿವರ ಪಡೆಯಲು, ಮತದಾರರ ಪಟ್ಟಿಯನ್ನು ಶುದ್ಧಗೊಳಿಸಲು ಸೂಕ್ತ ದಾಖಲೆಗಳನ್ನು ಒದಗಿಸಿ ಈ ಸೇವೆಯನ್ನು ಪಡೆಯಬಹುದಾಗಿದೆ. ಮತದಾರರ ಪಟ್ಟಿ ಪರಿಶೀಲಿಸುವ ವಿಧಾನ :
1. ಮತದಾರರು ತಮ್ಮ ಮೊಬೈಲ್‍ನಲ್ಲಿ voter helpline ಎಂಬ ಆ್ಯಪ್‍ನ್ನು ಡೌನ್‍ಲೋಡ್ ಮಾಡಿ ವಿವರಗಳನ್ನು ಅದರಲ್ಲಿ ನಮೂದಿಸಿ ಪರಿಶೀಲಿಸಬಹುದು.
2.ನಾಡಕಚೇರಿ, ಮಂಗಳೂರು ಒನ್, ಸೇವಾ ಸಿಂಧು ಮತ್ತಿರರ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬಹುದು.
3.ಗ್ರಾಮ ಪಂಚಾಯತ್‍ಗಳಲ್ಲಿರುವ ಬಾಪೂಜಿ ಸೇವಾಕೇಂದ್ರ, ಅಟಲ್‍ಜಿ ಜನಸ್ನೇಹಿ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲಿಸಬಹುದು.
4. ತಾಲೂಕು ಕಚೇರಿ, ಎ.ಸಿ. ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಬಹುದು.
5. ಮತದಾರರ ಸಹಾಯವಾಣಿ 1950 ಸಂಖ್ಯೆಗೆ ಕರೆ ಮಾಡಬಹುದು.
6.ವೆಬ್ ಪೋರ್ಟಲ್  www.nvsp.in ಇದರಲ್ಲಿಯೂ ಪರಿಶೀಲಿಸಬಹುದು.
7. ತಮ್ಮ ಊರಿನ ಮತಗಟ್ಟೆ ಅಧಿಕಾರಿಗಳಲ್ಲಿ ಪರಿಶೀಲಿಸಬಹುದು.

Also Read  ತಾ.ಪಂ. ಹಾಗೂ ಗ್ರಾ.ಪಂ. ಅನುದಾನದಲ್ಲಿ ► ಮರ್ದಾಳ ರಸ್ತೆ ದುರಸ್ತಿಗೆ ಚಾಲನೆ

ಮತದಾರರು ತಮ್ಮ ಹೆಸರು ಸೇರ್ಪಡೆ, ತೆಗೆದು ಹಾಕಲು, ತಿದ್ದುಪಡಿ ಮಾಡಲು, ಪರಿಶೀಲನೆ ಮತ್ತು ದೃಡೀಕರಿಸಲು ಈ ಕಾರ್ಯಕ್ರಮದಲ್ಲಿ ಸುವರ್ಣ ಅವಕಾಶವಿದೆ. ಚುನಾವಣಾ ಆಯೋಗವು ಅನುಮೋದಿಸಿರುವ ಯಾವುದೇ ದಾಖಲೆಗಳನ್ನು (ಪಾಸ್‍ಪೋರ್ಟ್/ಡ್ರೈವಿಂಗ್ ಲೈಸನ್ಸ್/ಆಧಾರ್ ಕಾರ್ಡ್/ಬ್ಯಾಂಕ್ ಪಾಸ್ ಬುಕ್/ರೈತರ ಗುರುತಿನ ಚೀಟಿ ಮತ್ತಿತರ ದಾಖಲೆ) ತಂದು ಈ ಕೇಂದ್ರಗಳಲ್ಲಿ ಪರಿಶೀಲನೆ ಮಾಡಬಹುದು.

Also Read  ರಾತ್ರೋರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಭೇಟಿ ನೀಡಿದ ಡಿಸಿಎಂ ಡಿಕೆಶಿ


ಮತದಾರರ ಪಟ್ಟಿಗೆ ಹೆಸರು ಸೇರಿಸಲು ಪಾರಂ 6, ಹೆಸರು, ಭಾವಚಿತ್ರ ಮತ್ತಿತರ ಮಾಹಿತಿ ತಿದ್ದುಪಡಿ ಮಾಡಲು ಫಾರಂ 8 ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಫಾರಂ 7 ಅರ್ಜಿಗಳನ್ನು ನೀಡಬೇಕು. ಈ ಮೇಲಿನ ಕೇಂದ್ರಗಳಲ್ಲಿ ಈ ಅರ್ಜಿಗಳು ಲಭ್ಯವಿದೆ.ಮತದಾರರ ವಿವರಗಳನ್ನು ಸರಿಪಡಿಸಿ ಶೇ 100 ರಷ್ಟು ಶುದ್ಧವಾದ ಮತದಾರರ ಪಟ್ಟಿ ತಯಾರಿಸಲು ಈ ಪರಿಶೀಲನಾ ಕಾರ್ಯಕ್ರಮ ಸಪ್ಟೆಂಬರ್ 1 ರಿಂದ ನಡೆಯಲಿದ್ದು, ಜಿಲ್ಲೆಯ ಮತದಾರರು ಈ ಅವಕಾಶವನ್ನು ಬಳಸಿಕೊಂಡು ಸಹಕರಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top