ಶಕ್ತಿ ವಸತಿ ಶಾಲೆಯಲ್ಲಿ ಅಂತರಾಷ್ಟ್ರೀಯಕ್ರೀಡಾ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.31.ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್‍ಕ್ರೀಡಾ ಪಟು ಹಾಗೂ ತರಬೇತಿದಾರಎಂ.ಟೆಕ್ ಪದವೀದರ ಸ್ವರೂಪ್‍ಎಸ್.ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆದರಾಷ್ಟ್ರೀಯಕ್ರೀಡಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆ ಮನುಷ್ಯನದೈಹಿಕ ಸಾಮಥ್ರ್ಯವನ್ನು ಹೆಚ್ಚಿಸುವುದಲ್ಲದೆ ಭೌದ್ಧಿಕ ಮಟ್ಟವನ್ನು ಹೆಚ್ಚಿಸುವುದು ವಿದ್ಯಾರ್ಥಿಗಳ ಶಾಲಾ ದಿನಗಳಲ್ಲಿಯೇ ಆಟದ ಮೈದಾನ ಹಾಗೂ ಕ್ರೀಡೆಯ ಮಹತ್ವವನ್ನು ತಿಳಿದು ಅದರ ಸದ್ಬಳಕೆ ಮಾಡಿಕೊಂಡುಕ್ರೀಡೆ ಹಾಗೂ ಶಿಕ್ಷಣ ಎರಡರಲ್ಲೂಉನ್ನತ ಸಾಧನೆಯನ್ನು ಮಾಡಬೇಕುಎಂದುವಿದ್ಯಾರ್ಥಿಗಳು ತಮ್ಮಅಭಿರುಚಿಯ ವಿಷಯಗಳನ್ನು ಆಯ್ಕೆ ಮಾಡಿಕೊಂಡ ಮೇಲೆ ಅದರಲ್ಲಿ ಸಾಧನೆಯನ್ನು ಮಾಡುವಛಲ ಹೊಂದಿರಬೇಕುಎಂದು ಹೇಳಿದರು. ಶಕ್ತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾಕಾಮತ್ ಜಿ. ವಿದ್ಯಾರ್ಥಿಗಳನ್ನುದ್ದೇಶಿಸಿ ವಿದ್ಯಾರ್ಥಿಜೀವನದಲ್ಲಿ ವಿದ್ಯಾರ್ಥಿಗಳಿಗೆ ಆಟ ಹಾಗೂ ಆಟದ ಮೈದಾನವೆಂದರೆಎಲ್ಲಿಲ್ಲದ ಒಲವು ಆದರೆಆಟವೊಂದೇಜೀವನದಗುರಿಯಾಗಬಾರದುಅಥವಾ ಪಾಠವೊಂದೇಜೀವನದ ಸಾಧನೆಯಾಗಬಾರದು.

Also Read  ಮಡಿಕೇರಿ: ತಾಯಿಯ ಪ್ರಾಣ ಉಳಿಸಿದ ಬಾಲಕನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ..!

ಆಟ ಪಾಠಎರಡರಲ್ಲಿಯೂ ಸಮತೋಲನವನ್ನು ಸಾಧಿಸಿ ಜೀವನದಲ್ಲಿಉನ್ನತ ಮಟ್ಟಕ್ಕೇರಬೇಕೆಂದು ಹೇಳಿದರು.ಭಾರತದ ಶ್ರೇಷ್ಠ ಹಾಕಿ ಕ್ರೀಡಾ ಪಟು ಮೇಜರ್‍ಧ್ಯಾನ್‍ಚಂದ್‍ಅವರ ಸ್ವರಣಾರ್ಥವಾಗಿ ನಡೆಸಿದ ಕಾರ್ಯಕ್ರಮದಲ್ಲಿಅವರ ಬದುಕು ಸಾಧನೆಯ ಬಗ್ಗೆ ಸಾಕ್ಷ್ಯಾಚಿತ್ರದ ಮೂಲಕ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯಕ್ರೀಡಾ ದಿನದ ಹಾಗೂ ಕ್ರೀಡೆಯ ಮಹತ್ವವನ್ನು ತಿಳಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರು ಶ್ರೀ ಕೆ.ಸಿ ನಾೈಕ್, ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ. ಶಕ್ತಿ ಎಜ್ಯುಕೇಶನ್ ಶಕ್ತಿ ಪ ಪೂ ಕಾಲೇಜಿನ ಪ್ರಾಂಶುಪಾಲ ಪ್ರಭಾಕರಜಿ.ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ಸಿದ್ಧಾಂತ್, ಕಾರ್ಯಕ್ರಮದ ಮಹತ್ವವನ್ನುಕುಮಾರಿ ಜಿಶ್ಮಿತ, ನಿರೂಪಣೆಯನ್ನುಕುಮಾರಿ ರೋಸ್ಮಿ ಮತ್ತು ಮಾರ್ಕ್, ಹಾಗೂ ಧನ್ಯವಾದವನ್ನುಕುಮಾರಿಗ್ಲೋರಿನೆರೆವೇರಿಸಿದರು.

 

error: Content is protected !!
Scroll to Top