(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.31.ಮರ್ದಾಳದ ಗಣೇಶ್ ಕೈಕುರೆಯವರ ಭತ್ತದ ಗದ್ದೆಯಲ್ಲಿ ಬೆಥನಿ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಂದ “ಕಂಡೊಟೊಂಜಿ ದಿನ” ಕಾರ್ಯಕ್ರಮ ನಡೆಸಲಾಯಿತು.
ಕಡಬ ಲಯನ್ಸ್ ಅಧ್ಯಕ್ಷ ತೋಮಸ್ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.ನೂಜಿಬಾಳ್ತಿಲ ಗ್ರಾ.ಪಂ ಅಧ್ಯಕ್ಷ , ಬೆಥನಿ ಪ.ಪೂ ಕಾಲೇಜಿನ ಎಸ್‍ಡಿಎಮ್‍ಸಿ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಮಾತನಾಡಿ, ಕೃಷಿಯೇ ರೈತರ ಬೆನ್ನುಲುಬಾಗಿದ್ದು ಕೃಷಿ ಇಲ್ಲದೆ ದೇಶ ನಡೆಯಲು ಸಾಧ್ಯವಿಲ್ಲ ಎಂದ ಅವರು ಬೆರಳೆಣಿಕೆಯಲ್ಲಿ ನಡೆಸುತ್ತಿರುವ ಭತ್ತದ ಕೃಷಿಕರನ್ನು ಓಲೈಸುವ ಮೂಲಕ ಭತ್ತದ ಕೃಷಿಗೆ ಪ್ರಾಮುಖ್ಯತೆ ನೀಡಬೇಕೆಂದರು. ಕಡಬ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ಕಡಬ ಕದಂಬ ಜೆಸಿಐ ಅಧ್ಯಕ್ಷ ರವಿಚಂದ್ರ ಪಡುಬೆಟ್ಟು ಮಾತನಾಡಿ ಗ್ರಾಮೀಣ ಭಾಗದಲ್ಲಿ ಕೃಷಿ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸಿದರು.ಬೆಥನಿ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ಮಾತನಾಡಿ ಪಠ್ಯಶಿಕ್ಷಣದೊಂದಿಗೆ ಕೃಷಿ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದ್ದು ಇಂದು ನಮ್ಮ ವಿದ್ಯಾರ್ಥಿಗಳಿಗೆ ಮರ್ದಾಳದಲ್ಲಿ ನಮ್ಮ ತಾ.ಪಂಸದಸ್ಯ ಗಣೇಶ್ ಕೈಕುರೆಯರ ಕೃಷಿ ಭೂಮಿಯಲ್ಲಿ ಭತ್ತದ ಕೃಷಿ ನಾಟಿ ಮಾಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದ ಅವರು ಇಂತಹ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟ ಗಣೇಶ್ ಕೈಕುರೆ ಕುಟುಂಬಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.
ಜೆಸಿಐ ಪ್ರ.ಕಾರ್ಯದರ್ಶಿ ಕಾಶಿನಾಥ್ ಗೋಗಟೆ, ಲಯನ್ಸ್ ನಿಕಟಪೂರ್ವ ಅಧ್ಯಕ್ಷ ಸ್ಕರಿಯಾ, ಮರ್ದಾಳ ಗ್ರಾ.ಪಂ ಪಿಡಿಒ ಶೇಖರ್, ಕಾರ್ಯದರ್ಶಿ ವೆಂಕಟ್ರಮಣ , ಲೆಕ್ಕಸಹಾಯಕ ಭುವನೇಂದ್ರ ಕುಮಾರ್,ಶ್ರೀ,ಕ್ಷೇ.ಧ.ಗ್ರಾ.ಯೋಜನೆ ಬಿಳಿನೆಲೆ ವಲಯ ಮೇಲ್ವಿಚಾರಕ ಧರ್ಣಪ್ಪ ಗೌಡ, ಸೇವಾ ಪ್ರತಿನಿಧಿ, ಸತೀಶ್.ಕೆ , ಭಾರತೀಯ ಸೇನಾನಿ ಚರಣ್ ಐತ್ತೂರು, ಬೆಥನಿ ಪ್ರೌಢ ಶಿಕ್ಷಕ ತೋಮಸ್ ಎ.ಕೆ ವೇದಿಕೆಯಲ್ಲಿನ ಉಪಸ್ಥತರಿದ್ದರು. ಬೆಥನಿ ಪ.ಪೂ ಕಾಲೇಜಿನ ಉಪನ್ಯಾಸಕರಾದ ಶಾಂಭವಿ, ಚಂದ್ರಶೇಖರ, ಆ್ಯನಿತೋಮಸ್, ಲೀನಾ, ದಿಲ್‍ಶಾದ್‍ಶ್ವೇತಾರಾಣಿ, ಜಿನ್ಸಿ, ಬೀನಾ, ಪುನೀತ್, ಶಿಕ್ಷಕರಾದ ಬೀಜು, ಪ್ರದೀಪ್, ದೇವಣ್ಣ, ಪ್ರಮುಖರಾದ ಮೋಹನ್ ಪಂಜೋಡಿ, ಸತೀಶ್‍ಚಂದ್ರ ಮೈಕಾಜೆ, ವೆಂಕಟರಮಣ ಮೊದಲಾದವರು ಉಪ್ಥಿತರಿದ್ದರು.ಲ| ಗಣೇಶ್ ಕೈಕುರೆ ಸ್ವಾಗತಿಸಿ, ನೀಲಾವತಿಶಿವರಾಂ ವಂದಿಸಿದರು. ಲ|ರಮೇಶ್‍ನಾಯಕ ಕಾರ್ಯಕ್ರಮ ನಿರೂಪಿಸಿದರು.