ನೂಜಿಬಾಳ್ತಿಲ: ಸೇತುವೆ ತಡೆಗೋಡೆ ಕುಸಿತ ➤ ದುರಸ್ಥಿಗೆ ಆಗ್ರಹ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.31. ನೂಜಿಬಾಳ್ತಿಲ ಗ್ರಾಮದ ಅರಿಮಜಲು ಎಂಬಲ್ಲಿಯ ಸೇತುವೆ ತಡೆಗೋಡೆ ಕುಸಿದಿದ್ದು, ಅಪಾಯ ಸಂಭವಿಸುವ ಮೊದಲು ದುರಸ್ಥಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಕಲ್ಲುಗುಡ್ಡೆ – ಎಂಜಿರ ಸಂಪರ್ಕ ಜಿ.ಪಂ. ರಸ್ತೆಯ ಅರಿಮಜಲು ಎಂಬಲ್ಲಿ ತೋಡಿಗೆ ಸೇತುವೆ ನಿರ್ಮಿಸಿದ್ದು, ಇದೀಗ ಈ ಸೇತುವೆ ತಡೆಗೋಡೆ ಕುಸಿದಿದ್ದು, ಅಪಾಯದ ಸ್ಥಿತಿಯಲ್ಲಿದ್ದು. ಈ ಪ್ರದೇಶ ಇಳಿಜಾರು ಹಾಗೂ ತಿರುವಿನಿಂದ ಕೂಡಿರುವುದರಿಂದ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರು ಅಪಾಯದ ಸ್ಥಿತಿ ಎದುರಿಸಬೇಕಾಗಿದ್ದು, ಮುಂದೆ ಹೆಚ್ಚಿನ ಅಪಾಯ ಸಂಭವಿಸುವ ಮೊದಲು ಸೇತುವೆ ತಡೆಗೋಡೆ ದುರಸ್ಥಿಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಸೇತುವೆ ತಡೆಗೋಡೆ ದುರಸ್ಥಿಗೊಳಿಸುವಂತೆ ಇತ್ತೀಚೆಗೆ ನಡೆದ ನೂಜಿಬಾಳ್ತಿಲ ಗ್ರಾಮಸಭೆಯಲ್ಲಿಯೂ ಆ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದರು.

Also Read  ಕರಾಟೆಯಲ್ಲಿ ಸನ್ವಿತ್‍ಗೆ ಯಲ್ಲೋ ಬೆಲ್ಟ್

error: Content is protected !!
Scroll to Top