ಕಡ್ಯ ಕೊಣಾಜೆ – ರೆಂಜಿಲಾಡಿ ರಸ್ತೆಗೆ ಆಗಬೇಕಿದೆ ಕಾಯಕಲ್ಪ ➤ ಡಾಮರೀಕರಣ ಆಗಬೇಕಿದೆ 2 ಕೀ.ಮೀ. ರಸ್ತೆ; ದುರಸ್ಥಿಗೆ ಆಗ್ರಹ!

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.31.ಕಡಬ ತಾಲೂಕಿನ ಕಡ್ಯ ಕೊಣಾಜೆ ಗ್ರಾಮದ ಕೊಣಾಜೆಯಿಂದ ರೆಂಜಿಲಾಡಿ ಗ್ರಾಮದ ಮಾರಪ್ಪೆವರೆಗಿನ ಸಾರ್ವಜನಿಕ ರಸ್ತೆಯು ತೀರಾ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದ್ದು, ರಸ್ತೆ ಅಭಿವೃದ್ಧಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೊಣಾಜೆ ಪೇಟೆಯಿಂದ ಕಲ್ಲುಗುಡ್ಡೆ ರಸ್ತೆಯ ಸ್ವಲ್ಪ ದೂರದ ವರೆಗೆ ಹಲವು ವರ್ಷಗಳ ಹಿಂದೆ ಡಾಮರೀಕರಣಗೊಂಡಿದ್ದು, ಅದೂ ಈಗ ಕಿತ್ತುಹೋಗಿದ್ದು, ಬಳಿಕ ಮುಂದೆ ರೆಂಜಿಲಾಡಿ ಗ್ರಾಮದ ಮಾರಪ್ಪೆ ಎಂಬಲ್ಲಿ ವರೆಗೆ ಸುಮಾರು 2 ಕಿ.ಮೀ. ದೂರದ ವರೆಗೆ ರಸ್ತೆ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ. ಅಲ್ಲದೇ, ಈ ರಸ್ತೆಯ ದುರಸ್ಥಿಯಾಗದೇ, ಕಚ್ಛಾ ರಸ್ತೆಯಂತಿದ್ದು, ಮಳೆಗಾಲದಲ್ಲಿ ಈ ರಸ್ತೆ ಕೆಸರುಮಯಗೊಂಡು, ಹದಗೆಟ್ಟು ದ್ವೀ ಚಕ್ರ ವಾಹನ ಸವಾರರು, ಸೇರಿದಂತೆ ಇತರೆ ವಾಹನ ಸವಾರರು ಸಂಕಷ್ಟಪಡುವಂತೆ ಮಾಡಿದೆ.

ಈ ರಸ್ತೆ ಮುಂದಕ್ಕೆ ಕಲ್ಲುಗುಡ್ಡೆ ಪೇಟೆಯನ್ನು ಸಂಪರ್ಕಿಸುತ್ತಿದ್ದು, ಇಚ್ಲಂಪಾಡಿ-ಕಲ್ಲುಗುಡ್ಡೆ ಮಾರಪ್ಪೆ ವರೆಗೆ ಈ ರಸ್ತೆಯು ಸಡಕ್‍ನಲ್ಲಿ ಡಾಮರೀಕರಣಗೊಂಡಿದ್ದು, ಮಾರಪ್ಪೆಯಿಂದ ಕೊಣಾಜೆ ವರೆಗೆ ರಸ್ತೆ ಡಾಮರೀಕರಣಗೊಂಡಿರುವುದಿಲ್ಲ.ಗ್ರಾಮ ಸಭೆಯಲ್ಲಿ ಪ್ರಸ್ತಾಪ:ಕೊಣಾಜೆಯಿಂದ ಕಲ್ಲುಗುಡ್ಡೆ ಹಾಗೂ ನೆಲ್ಯಾಡಿ, ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಈ ರಸ್ತೆಯು ಮಾರಪ್ಪೆ ವರೆಗೆ ವಾಹನ ಸಂಚಾರಕ್ಕೆ ದುಸ್ತರವಾಗಿದ್ದು, ದಿನನಿತ್ಯ ನೂರಾರು ಮಂದಿ ಈ ರಸ್ತೆಯಲ್ಲಿ ಕಡಬ, ಕಲ್ಲುಗುಡ್ಡೆ, ನೆಲ್ಯಾಡಿಗೆ ಶಾಲಾ, ಕಾಲೇಜು ಸೇರಿದಂತೆ ದಿನನಿತ್ಯದ ಕೆಲಸ ಕಾರ್ಯಗಳಿಗೆ ಪ್ರಯಾಣಿಸುವವರು ಈ ಮಾರ್ಗವಾಗಿಯೇ ಸಂಚರಿಸುತ್ತಿದ್ದು, ಈ ರಸ್ತೆ ದುರಸ್ಥಿಗೊಂಡು ಡಾಮರೀಕರಣಗೊಳಿಸುವಂತೆ ಕಡ್ಯ-ಕೊಣಾಜೆ ಗ್ರಾಮ ಸಭೆಯಲ್ಲಿಯು ಗ್ರಾಮಸ್ಥರು ಆಗ್ರಹಿಸಿದ್ದರು.

Also Read  ಭಟ್ಕಳ: ಸಮುದ್ರದಲ್ಲಿ ಸಿಲುಕಿದ್ದ ಬೋಟ್ ನ 24 ಮೀನುಗಾರರ ಜೀವ ರಕ್ಷಣೆ

ಸೇತುವೆ ನಿರ್ಮಾಣವಾಗಿದೆ;
ಕಲ್ಲುಗುಡ್ಡೆ-ಕೊಣಾಜೆ ರಸ್ತೆಯ ಉದೆಕಟ್ಟ ಎಂಬಲ್ಲಿಯ ತೋಡಿಗೆ ಕೆಲ ವರ್ಷಗಳ ಹಿಂದೆ ಸೇತುವೆ ನಿರ್ಮಾಣಗೊಂಡಿದ್ದು, ಇದೀಗ ಸೇತುವೆ ಬಳಿ ಸ್ವಲ್ಪ ದೂರದ ವರೆಗೆ ಕಡ್ಯ ಕೊಣಾಜೆ ಗ್ರಾ.ಪಂ.ನ ಅಭಿವೃದ್ಧಿ ಅನುದಾನ ಹಾಗೂ ಉದ್ಯೋಗ ಖಾತರಿ ಯೋಜನೆಯಡಿ ಕಾಂಕ್ರಿಟೀಕರಣ ಮಾಡಲಾಗಿದ್ದು, ಉಳಿದೆಡೆ ರಸ್ತೆ ಮಣ್ಣಿನ ರಸ್ತೆಯಾಗಿಯೇ ಉಳಿದಿದ್ದು, ಈ ರಸ್ತೆಯನ್ನು ಆದಷ್ಟು ಬೇಗ ದುರಸ್ಥಿಗೊಳಿಸುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಸರಕಾರಕ್ಕೆ ಪ್ರಸ್ತಾವಣೆ ಮಾಡಲಾಗಿದೆ;ಇಚ್ಲಂಪಾಡಿ-ಕೊಣಾಜೆ ರಸ್ತೆಯ ಇಚ್ಲಂಪಾಡಿ-ಕಲ್ಲುಗುಡ್ಡೆ-ಮಾರಪ್ಪೆ ವರೆಗೆ ಸಡಕ್‍ನಲ್ಲಿ ಡಾಮರೀಕರಣಗೊಂಡಿದ್ದು, ಮಾರಪ್ಪೆಯಿಂದ ಮುಂದಕ್ಕೆ ರಸ್ತೆಗೆ ಡಾಮರೀಕರಣಕ್ಕೆ ಅನುದಾನ ಕಲ್ಪಿಸುವಂತೆ ಸರಕಾರಕ್ಕಾಗಿ ಪ್ರಸ್ತಾವಣೆ ಕಳುಹಿಸಲಾಗಿದೆ.

error: Content is protected !!
Scroll to Top