ಕೇಂದ್ರ ಸರ್ಕಾರದವತಿಯಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗಾಗಿ ಜಾರಿಗೆ ತರಲಾದ ➤ ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.31.ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ (PM-KMY) ವೃದ್ಧಾಪ್ಯ ಪಿಂಚಣಿ ಯೋಜನೆಯನ್ನು 18 ರಿಂದ 40 ವರ್ಷದೊಳಗಿನ ಸಣ್ಣ ಮತ್ತು ಅತಿಸಣ್ಣ ರೈತರಿಗಾಗಿ ಜಾರಿಗೆ ತರಲಾಗಿದೆ.


ಈ ಯೋಜನೆಯಡಿ ಪ್ರವೇಶ ಪಡೆಯುವ ಸಣ್ಣ ಮತ್ತು ಅತಿಸಣ್ಣ ರೈತರು – ಪ್ರತಿ ತಿಂಗಳಿಗೆ ನಿಗದಿಪಡಿಸಿದ ವಿಮಾಕಂತು ರೂ.55/- ರಿಂದ ರೂ.200/-ರವರೆಗೆ ಪಾವತಿಸಬೇಕು. 60 ವರ್ಷ ದಾಟಿದ ನಂತರ ಪ್ರತಿ ತಿಂಗಳು ಕನಿಷ್ಠ ಪಿಂಚಣಿ ರೂ.3000/- ದೊರೆಯುವುದು. ಪ್ರೀಮಿಯಂ ಮೊತ್ತದಲ್ಲಿ 50% ಪಾಲಿನ ಮೊತ್ತವನ್ನು ಕೇಂದ್ರ ಸರಕಾರ ಪಾವತಿಸುತ್ತದೆ. ಪಿಂಚಣಿಯನ್ನು ಪಾವತಿಸುವ ಜವಾಬ್ದಾರಿ ಎಲ್.ಐ.ಸಿ.ಯದ್ದಾಗಿರುತ್ತದೆ.

ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ (PM-KMY) ವೃದ್ಧಾಪ್ಯ ಪಿಂಚಣಿ ಯೋಜನೆಯು ರೈತ ಸಮುದಾಯಕ್ಕೆ ಉಪಯುಕ್ತವಾದ ಯೋಜನೆಯಾಗಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಂಡು ಸದರಿ ಯೋಜನೆಯ ಲಾಭವನ್ನು ಪಡೆಯಲು ಕೋರಿದೆ. ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ(CSC) ಉಚಿತವಾಗಿ ದಾಖಲಾತಿ ಮಾಡುವ ಮೂಲಕ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.ಹೆಚ್ಚಿನ ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ /ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ವಕೀಲೆ ನೇಣು ಬಗಿದುಕೊಂಡು ಆತ್ಮಹತ್ಯೆ -ಕಾರಣ ನಿಗೂಢ

error: Content is protected !!
Scroll to Top