ದ. ಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಂಗಳೂರು ➤ ದತ್ತು ಕೇಂದ್ರದಲ್ಲಿ ದಾಖಲಿಸಲಾಗಿರುವ ಮಗುವಿನ ವಾರಸುದಾರರ ಪತ್ತೆಗೆ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.31.ಜೂನ್ 20 ರಂದು ಹೆಣ್ಣು ಮಗುವನ್ನು ತಾತ್ಕಾಲಿಕ ಪಾಲನೆ ಪೋಷಣೆಗಾಗಿ ಸಮಿತಿಯ ವಶಕ್ಕೆ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಂಗಳೂರು ಇವರ ಆದೇಶದನ್ವಯ ಪುತ್ತೂರಿನ ಶ್ರೀ ರಾಮಕೃಷ್ಣ ಸೇವಾ ಸಮಾಜದ “ವಾತ್ಸಲ್ಯಧಾಮ” ದತ್ತು ಕೇಂದ್ರದಲ್ಲಿ ದಾಖಲಿಸಲಾಗಿದೆ.

ಈ ಮಗುವಿನ ವಾರಸುದಾರರು ಯಾರಾದರೂ ಇದ್ದಲ್ಲಿ 60 ದಿನದೊಳಗೆ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 1 ನೇ ಮಹಡಿ, ಜಿಲ್ಲಾಧಿಕಾರಿಗಳ ಕಛೇರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು 575001 ಕರ್ನಾಟಕ ದೂರವಾಣಿ ಸಂಖ್ಯೆ :0824-2440004 /9482756407 ಇ-ಮೇಲ್ ಐಡಿ:dcpu.mnglr@gmail.com ಸಂಪರ್ಕಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಇವರ ಪ್ರಕಟಣೆ ತಿಳಿಸಿದೆ.

Also Read  ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ  ತಾಲೂಕು ಪ್ರವಾಸ

error: Content is protected !!
Scroll to Top