ದ. ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ(ರಿ) ಮಂಗಳೂರು ➤ ನಿವೃತ್ತ ಸರಕಾರಿ ನೌಕರರ – ಮಹಾಸಭೆ/ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.31.ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ(ರಿ) ಮಂಗಳೂರು ಇದರ 2018-19 ರ ಸಾಲಿನ ಮಹಾಸಭೆ ರಾಜ್ಯ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಸ್ ಸೀತಾರಾಮ ಅಧ್ಯಕ್ಷತೆಯಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ದಯಾನಂದ ನಾಯ್ಕ್‍ರವರು ಮಾತಾಡಿ ನಿವೃತ್ತ ಸರಕಾರಿ ನೌಕರರು ಹಿರಿಯರಾಗಿದ್ದು, ದೇಶಕ್ಕೆ ಅವರು ಅನೇಕ ಕೊಡುಗೆಗಳನ್ನು ನೀಡಿದ್ದು ಅವರನ್ನು ಕಿರಿಯರು ಗೌರವ ಪೂರ್ವಕವಾಗಿ ಕಾಣಬೇಕೆಂದು ಹಲವಾರು ಉದಾಹರಣೆ ಸಹಿತ ಅವರ ಮಾರ್ಗದರ್ಶನದಂತೆ ನಡೆಯಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ, ಮಂಗಳೂರು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸ್ನಾತ್ತಕೋತ್ತರ ವಿಭಾಗದ ನಿರ್ದೇಶಕರಾದ ಡಾ.ಎ. ಪ್ರಭಾಕರ ರಾವ್ ಹಾಗೂ ಸಂಘದ ಸದಸ್ಯರಾಗಿ ಏಪ್ರಿಲ್ 1ರಂದು 75 ವರ್ಷ ಪ್ರಾಯ ಮೀರಿದ 12 ಜನ ಸದಸ್ಯರನ್ನು ಸನ್ಮಾನಿಸಲಾಯಿತು. ನಿವೃತ್ತ ಸರಕಾರಿ ನೌಕರರ ನೇತ್ರ ತಪಾಸಣೆ ಹಾಗೂ ವೈದ್ಯಕೀಯ ತಪಾಸಣೆ ನಡೆಯಿತು. ನಿವೃತ್ತ ನೌಕರರು ಇದರ ಸದುಪಯೋಗ ಪಡೆದುಕೊಂಡರು.

Also Read  ಪುತ್ತೂರು ಹಾಗೂ ಕಡಬ 9 ಮಂದಿಗೆ ಕೊರೊನಾ ದೃಢ ➤ ಅವಳಿ ತಾಲೂಕುಗಳಲ್ಲಿ ಒಟ್ಟು120 ಕೊರೋನಾ ಪ್ರಕರಣ... !!!

 

error: Content is protected !!
Scroll to Top