ನಿವೃತ್ತ ಮುಖ್ಯ ಶಿಕ್ಷಕ, ಪ್ರಶಸ್ತಿ ಪುರಸ್ಕೃತ ಬಾಬು ಅಜಿಲ ಕಲ್ಲುಗುಡ್ಡೆ ನಿಧನ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.30.ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ದಿ. ನೋಣಯ್ಯ ಅಜಿಲರ ಪುತ್ರ ನಿವೃತ್ತ ಮುಖ್ಯ ಶಿಕ್ಷಕ ಬಾಬು ಅಜಿಲ ಕೆ.(63 ವ.) ಅವರು ಅಸೌಖ್ಯದಿಂದ ಆ. 29ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಬಾಬು ಮಾಸ್ಟರ್ ಎಂದೇ ಪರಿಚಿತರಾಗಿದ್ದ ಇವರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಜಾನಪದ ಕಲಾವಿದ ಪ್ರಶಸ್ತಿಗೆ ಭಾಜನರಾಗಿದ್ದರು. ಎಡಮಂಗಿಲದ ಕಂರ್ಬಿಲ, ರೆಂಜಿಲಾಡಿ, ಸುಬ್ರಹ್ಮಣ್ಯ, ನೇರ್ಲ, ನೇಲಡ್ಕ, ನೂಜಿಬಾಳ್ತಿಲ, ಸಂಪ್ಯ, ಕುಂಬ್ರ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು, ಒರ್ವ ಪುತ್ರಿಯನ್ನು ಅಗಲಿದ್ದಾರೆ.

error: Content is protected !!
Scroll to Top