“ಮೂಲವಿಜ್ಞಾನಕ್ಕೆ ಹೆಚ್ಚು ಗಮನ ಇಂದಿನ ಅಗತ್ಯ” ➤ ಡಾ| ರೊನಾಲ್ಡ್ ನಜ್ರತ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.30.ಆಧುನಿಕ ಯುಗವು ವಿಜ್ಞಾನ ತಂತ್ರಜ್ಞಾನದ ಯುಗವಾಗಿದೆ. ಮುಂದುವರಿಯುತ್ತಿರುವ ನಮ್ಮ ದೇಶವು ಹೊಸ ಹೊಸ ವೈಜ್ಞಾನಿಕ ಸಂಶೋಧನೆ ಮಾಡುವುದರೊಂದಿಗೆ ಮೂಲ ವಿಜ್ಞಾನದ ವಿಷಯಗಳ ಕುರಿತು ಹೆಚ್ಚು ಗಮನ ನೀಡುವುದು ಅತೀ ಅಗತ್ಯ. ವಿಜ್ಞಾನದ ವಿದ್ಯಾರ್ಥಿಗಳು ಈ ಕುರಿತು ಹೆಚ್ಚು ಗಮನ ನೀಡಬೇಕು.

ಕೇಂದ್ರ ಸರಕಾರದ ಸ್ಟಾರ್ ಕಾಲೇಜು ಸ್ಕೀಮ್ ಇದಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತದೆ ಎಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ರೊನಾಲ್ಡ್ ನಜ್ರತ್ ಹೇಳಿದರು.ಅವರು ಭಾರತ ಸರಕಾರದ ಬಯೋಟೆಕ್ನಾಲಜಿ ಇಲಾಖೆಯಿಂದ ಸ್ಟಾರ್ ಕಾಲೇಜು ಮಾನ್ಯತೆ ಪಡೆದ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿೂ ಕಾಲೇಜಿನಲ್ಲಿ ನಡೆದ ‘ಸ್ಟಾರ್ ಕಾಲೇಜು ಸ್ಕೀಮ್‍ನ ಉದ್ಘಾಟನೆ ಹಾಗೂ ಸರಣಿ ಉಪನ್ಯಾಸ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

Also Read  ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ

ಸರಕಾರದ ವಿವಿಧ ಯೋಜನೆಗಳು ಇಂದು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಅದರಲ್ಲೂ ಸ್ಟಾರ್ ಕಾಲೇಜು ಯೋಜನೆ ಅತೀ ಮಹತ್ವದ್ದು. ಈ ಮಾನ್ಯತೆಯನ್ನು ಪಡೆದು ಕೊಂಡ ಕೆಲವೇ ಕಾಲೇಜುಗಳಲ್ಲಿ ಈ ಕಾಲೇಜು ಒಂದು. ಕರ್ನಾಟಕ ರಾಜ್ಯದಲ್ಲಿ ಸ್ಟಾರ್ ಮಾನ್ಯತೆ ಪಡೆದ ಕಾಲೇಜುಗಳು ಒಟ್ಟು 11, ಅದರಲ್ಲಿ ಈ ಕಾಲೇಜು ಒಂದು ಎಂದವರು ಹೇಳಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಡಾ| ಹೆಚ್ ಆರ್ ಸುಜಾತ ಸ್ವಾಗತಿಸಿದರು. ಸಂಯೋಜಕಿ ಶ್ರುತಿ ವಂದಿಸಿದರು. ವಿದ್ಯಾರ್ಥಿನಿ ಕಾವ್ಯಾ ಪ್ರಭು ನಿರೂಪಿಸಿದರು.

error: Content is protected !!
Scroll to Top