(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.29. ಬಾರಕೂರು ಕಚ್ಚೂರು ಶ್ರೀ ಮಾಲ್ತೀದೇವಿ ಹಾಗೂ ಬಬ್ಬು ಸ್ವಾಮಿ ಮೂಲ ಕ್ಷೇತ್ರದಲ್ಲಿ 2020 ನೇ ಜನವರಿ ತಿಂಗಳಲ್ಲಿ ಜರುಗುವ ಬ್ರಹ್ಮಕಲಶೋತ್ಸವ ಹಾಗೂ ಪ್ರಥಮ ರಥೋತ್ಸವ ಪ್ರಯುಕ್ತ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ಆಯೋಜಿಸುವ ಕುರಿತು ಸಭೆ ನಡೆಸಲಾಯಿತು.
ಮಂಗಳೂರು ಕರ್ನಾಟಕ ಸರಕಾರಿ ನೌಕರರ ಸಭಾ ಭವನದಲ್ಲಿ ಪೂರ್ವಭಾವಿ ಸಭೆ ನಡೆದಿದ್ದು, ಈ ಸಭೆಯನ್ನು ಉಡುಪಿ ಜಿ.ಪಂ ಅಧ್ಯಕ್ಷ ದಿನಕರ ಬಾಬು ಕಾರ್ಯಕ್ರಮ ಉದ್ಘಾಟಿಸಿದರು. ಕಚ್ಚೂರು ದೇವಸ್ಥಾನದ ಅಧ್ಯಕ್ಷ ಗೋಕುಲ್‍ದಾಸ್ ಬಾರಕೂರು, ಶಿವಪ್ಪ ನಂತೂರು, ಪ್ರೇಮಾನಂದ ಬಾರ್ಕೂರು ಮತ್ತಿತರರು ಉಪಸ್ಥಿತರಿದ್ದರು.