ಕಾನೂನು ಪದವಿ ವಿಶ್ವವಿದ್ಯಾನಿಲಯ ಮಂಗಳೂರು ➤ ಪುನಾರಾವರ್ತಿತ ಕಾನೂನು ಪರೀಕ್ಷಾ ನೋಂದಣಿಗೆ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.29.ಮಂಗಳೂರು ವಿಶ್ವವಿದ್ಯಾನಿಲಯದ ಕಾನೂನು ಪದವಿಯ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕಾನೂನು ಪದವಿಯ ಪರೀಕ್ಷೆಗಳನ್ನು 2019-20ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಅಂತಿಮವಾಗಿ ನಡೆಸಲಿದೆ.

ಪರೀಕ್ಷೆ  ಬರೆಯಲು ಬಾಕಿಯಿರುವ ಪುನರಾವರ್ತಿತ ವಿದ್ಯಾರ್ಥಿಗಳು ಅಕ್ಟೋಬರ್ 2019 ಮತ್ತು ಏಪ್ರಿಲ್ 2020 ತಿಂಗಳಲ್ಲಿ ನಡೆಯಲಿರುವ ಪರೀಕ್ಷೆಗೆ ಆಯಾಯ ಕಾಲೇಜುಗಳಲ್ಲಿ ನೋಂದಣಿ ಮಾಡುವಂತೆ ತಿಳಿಸಲಾಗಿದೆ. ಏಪ್ರಿಲ್ 2020ರಲ್ಲಿ ನಡೆಸುವ ಪರೀಕ್ಷೆಗೆ ಹಾಜರಾಗಲು ಕೊನೆಯ ಅವಕಾಶವಾಗಿದ್ದು, ಮುಂದಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳಿಗಾಗಿ ಯಾವುದೇ ವಿಷಯಕ್ಕೆ ಸಂಬಂಧಿಸಿ ಕಾನೂನು ಪದವಿ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ ಎಂದು ಕುಲಸಚಿವರು (ಪರೀಕ್ಷಾಂಗ) ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಇವರ ಪ್ರಕಟಣೆ ತಿಳಿಸಿದೆ.

Also Read  ಕುಲ್ಕುಂದ: ಸಾಂಕೇತಿಕ ಜಾನುವಾರು ಜಾತ್ರೆ ಆಚರಣೆ

error: Content is protected !!
Scroll to Top