ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಇವರ ಸಹಯೋಗದೊಂದಿಗೆ ➤ `ಸ್ವಚ್ಛತಾ ರಸಪ್ರಶ್ನೆ-2019’

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.29.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು, ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಇವರ ಸಹಯೋಗದೊಂದಿಗೆ ಸ್ವಚ್ಛತಾ ರಸಪ್ರಶ್ನೆಯನ್ನು ಆಯೋಜಿಸಲಾಗಿತ್ತು.

ಸ್ವಚ್ಛಮೇವ ಜಯತೆ ಆಂದೋಲನದ ಅಂಗವಾಗಿ ಸ್ವಚ್ಛತೆ, ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ ಜಾಗೃತಿಗಾಗಿ ನಡೆಯುತ್ತಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ `ಸ್ವಚ್ಛತಾ ರಸಪ್ರಶ್ನೆ-2019’ ಕಾರ್ಯಕ್ರಮವು ಮಂಗಳೂರಿನ ಪುರಭವನದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಸೆಲ್ವಮಣಿ ಆರ್ ಅವರು ಚಾಲನೆ ನೀಡಿದರು.

ರಸಪ್ರಶ್ನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಸಂಯುಕ್ತ ಕಾಲೇಜು/ಖಾಸಗಿ ಶಾಲಾ ಕಾಲೇಜುಗಳ 8 ರಿಂದ 12 ನೇ ತರಗತಿ ವಿದ್ಯಾರ್ಥಿಗಳು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂಗಳೂರಿನ ಶಾರದಾ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಬಹುಮಾನವಾಗಿ ರೂ.10,000/-, ಮ್ಯಾಪ್ಸ್ ಕಾಲೇಜು ಕದ್ರಿ ದ್ವಿತೀಯ ಬಹುಮಾನವಾಗಿ ರೂ. 7,000/ ಮತ್ತು ತೃತೀಯ ಬಹುಮಾನವಾಗಿ ರೂ. 5000/- ಅನ್ನು ವಿಶ್ವಮಂಗಳ ಕಾಲೇಜು ಕೊಣಾಜೆ, ಮಂಗಳೂರು ಪಡೆದುಕೊಂಡಿತು.

Also Read  ಟೀಂ ಇಂಡಿಯಾ ತಂಡಕ್ಕೆ ಮತ್ತೆ ಮರಳಲಿರುವ ಬುಮ್ರಾ- ಟಿ-20 ವಿಶ್ವಕಪ್ ಆಡುವ ಸಾಧ್ಯತೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಕೆ.ಆನಂದ ಕುಮಾರ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಸುದೇವ ಕಾಮತ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ ಶಿವರಾಮಯ್ಯ, ವಾಲ್ ನಟ್ ನಾಲೆಡ್ಜ್ ಸೊಲ್ಯೂಷನ್ ಪ್ರೈಮೆಟ್ ಲಿಮಿಟೆಡ್ ಬೆಂಗಳೂರು ಇದರ ಅನಗ ಶ್ರೀಧರ್, ವಿಷಯ ನಿರೀಕ್ಷಕರಾದ ಶೋಭಾ ಎನ್, ಜಿಲ್ಲಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕರಾದ ನವೀನ್ ಭಾಗವಹಿಸಿದ್ದರು.

Also Read  ನೆಹರೂ ಯುವ ಕೇಂದ್ರ ವತಿಯಿಂದ ವಿದ್ಯಾರ್ಥಿಗಳ ಜೀವನ ಕೌಶಲ್ಯ ಶಿಕ್ಷಣ ಶಿಬಿರಕ್ಕೆ ಚಾಲನೆ

error: Content is protected !!
Scroll to Top