ಕಟ್ಟಡವೊಂದರಲ್ಲಿ ವೆಲ್ಡಿಂಗ್ ಕೆಲಸದಲ್ಲಿ ನಿರತರಾಗಿದ್ದಾಗ ಜಾರಿ ಬಿದ್ದ (26)ವರ್ಷದ ಯುವಕ ➤ ಚಿಕಿತ್ಸೆಗೆ ನೆರವು ನೀಡುವಂತೆ ಮನವಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆಗಸ್ಟ್.27.ಬಾಳಿಲದ ರಾಮಣ್ಣ ಮಡಿವಾಳ್‌ ಅವರ ಪುತ್ರ ಮುರಳೀಧರ (26) ಎಂಬವರು ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿರುವ ಇವರು ಒಂದು ವಾರದ ಹಿಂದೆ ಕಟ್ಟಡವೊಂದರಲ್ಲಿ ವೆಲ್ಡಿಂಗ್‌ ಕೆಲಸದಲ್ಲಿ ನಿರತರಾಗಿದ್ದಾಗ ಜಾರಿ ಬಿದ್ದು ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ಗಾಯಗಳಾಗಿವೆ.

ಇವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಂಗಳೂರಿನ ಶ್ರೀನಿವಾಸ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.  ಅವರ ಚಿಕಿತ್ಸೆಯ ವೆಚ್ಚ ಭರಿಸಲು ಕುಟುಂಬವು ಪರದಾಡುತ್ತಿದ್ದು, ದಾನಿಗಳ ನೆರವಿಗೆ ಮನವಿ ಮಾಡಿದೆ. ಜಾರಿ ಬಿದ್ದು ಹೊಟ್ಟೆ ಹಾಗೂ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಪ್ರಜ್ಞಾಹೀನ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿರುವ ಈತನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸಲು ಕುಟುಂಬವು ಅಸಹಾಯಕವಾಗಿದೆ.ಯಾರಾದರೂ ದಾನಿಗಳು ಮುರಳೀಧರ್ಅವರ ಬೆಳ್ಳಾರೆ ವಿಜಯ ಬ್ಯಾಂಕ್‌ (ಬ್ಯಾಂಕ್ಆಫ್ ಬರೋಡ) ಶಾಖೆಯ ಖಾತೆ ಸಂಖ್ಯೆ 102601111000843, ಐಎಫ್ಎಸ್ಸಿ ಕೋಡ್‌ VIJB0001026 ಸಂಖ್ಯೆಗೆ ಜಮೆ ಮಾಡಬಹುದು.

Also Read  ಮಾಣಿ: ಟಿಪ್ಪರ್, ಬಸ್, ಬೊಲೆರೋ, ಇನ್ನೋವಾ ನಡುವೆ ಸರಣಿ ಅಪಘಾತ ► ಇನ್ನೋವಾದ ಮೇಲೇರಿ ನಿಂತ ಟಿಪ್ಪರ್

 

error: Content is protected !!
Scroll to Top