ವಿಶ್ವವಿದ್ಯಾನಿಲಕಾಲೇಜು ಮಂಗಳೂರು,ಹಂಪನಕಟ್ಟೆವತಿಯಿಂದ ➤ ನೆರೆ ಸಂತ್ರಸ್ತರ ಪುನರ್ವಸತಿಗಾಗಿ ಸಂಗ್ರಹಿಸಲಾದ ಸಹಾಯ ನಿಧಿ ಹಸ್ತಾಂತರ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.27.ನೆರೆ ಸಂತ್ರಸ್ತರ ಪುನರ್ವಸತಿಗಾಗಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಹಂಪನಕಟ್ಟೆ ವತಿಯಿಂದ ಧನ ಸಂಗ್ರಹಿಸಲಾಗಿತ್ತು.

ಈ ಸಂಗ್ರಹಿಸಲಾದ ರೂ. 42,000/- ಮೊತ್ತವನ್ನು ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ರೂಪಾ ಜೆ. ಅವರಿಗೆ ಶನಿವಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ.ಎ. ಕುಮಾರಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಭಟ್ ಎಸ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂಪತ್ ಬಿ, ಕಾರ್ಯದರ್ಶಿ ಮಯೂರ್ ಎಮ್.ಬಿ, ಜೊತೆ ಕಾರ್ಯದರ್ಶಿ ವರ್ಷಿತಾ ಶೆಟ್ಟಿ, ಲಲಿತ ಕಲಾ ಕಾರ್ಯದರ್ಶಿ ಅಭಿಷೇಕ್ ಅಂಚನ್, ಜೊತೆ ಕಾರ್ಯದರ್ಶಿ ನಿಶಾ ಕುಮಾರಿ ಉಪಸ್ಥಿತರಿದ್ದರು.

Also Read  ಬಿಜೆಪಿ ರಾಜ್ಯ ಪದಾಧಿಕಾರಿಗಳ ಆಯ್ಕೆ  ➤ ಸಂಸದೆ ಶೋಭಾ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನೇಮಕ

error: Content is protected !!
Scroll to Top