ನೂಜಿಬಾಳ್ತಿಲ ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಾಲನೆ

(ನ್ಯೂಸ್ ಕಡಬ) newskadaba.comಕಲ್ಲುಗುಡ್ಡೆ, ಆಗಸ್ಟ್.26.ನೂಜಿಬಾಳ್ತಿಲ ರೆಂಜಿಲಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ 35ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ರವಿವಾರ ನೂಜಿಬಾಳ್ತಿಲ ಉ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಊರಿನ ಹಿರಿಯರಾದ ವೀರಮ್ಮ ಬದನಡ್ಕ ಉದ್ಘಾಟಿಸಿದರು. ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಜಯಂತ ಬರೆಮೇಲು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕುರಿಯಾಳ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹರಿಶ್ಚಂದ್ರ ಕನ್ವರೆ, ನೂಜಿಬಾಳ್ತಿಲ ಶಾಲಾ ಮುಖ್ಯ ಶಿಕ್ಷಕ ಶ್ರೇಯಾನ್ಸ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡ್ಕ, ನಿವೃತ್ತ ಸೈನಿಕರಾದ ಕುಶಾಲಪ್ಪ ಶಾಂತಿಗುರಿ ಉಪಸ್ಥಿತರಿದ್ದರು. ಸಮಿತಿಯ ಕೋಶಾಧಿಕಾರಿ ಪುರುಷೋತ್ತಮ ಗೌಡ ಕುಕ್ಕುತ್ತಡಿ ಸ್ವಾಗತಿಸಿದರು. ಹರ್ಷಿತ್ ನಡುವಳಿಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Also Read  FDA, SDA, ಸೇರಿ 757 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ KEA !

error: Content is protected !!
Scroll to Top