(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.26.ಆಗಸ್ಟ್.25.ರಂದು ಕಡಬದ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಶ್ರೀ ಕೃಷ್ಣಾಷ್ಟಮಿಯ ಸಂಭ್ರಮಾಚರಣೆ ಆಚರಿಸಲಾಯಿತು. ಇದರ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭಜನಾ ಕಾರ್ಯಕ್ರಮವನ್ನು ಏರರ್ಪಡಿಸಲಾಗಿತ್ತು.
ಈ ಹಬ್ಬದ ಪ್ರಯುಕ್ತ ಅಟ್ಟಿ ಮಡಿಕೆ ಹೊಡೆಯುವ ಕಾರ್ಯಕ್ರಮವನ್ನು ಏರರ್ಪಡಿಸಲಾಗಿತ್ತು. ಬೇರೆ ಬೇರೆ ಊರಿನಿಂದ ಬಂದಂತಹ ವಿವಿಧ ತಂಡಗಳು ಈ ಒಂದು ಅಟ್ಟಿ ಮಡಿಕೆ ಹೊಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೆಲವು ತಂಡಗಳು ಈ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದುಕೊಂಡಿವೆ. ಈ ಹಬ್ಬದ ವಿಶೇಷತೆಯನ್ನು ಜನರಿಗೆ ತಿಳಿಯ ಪಡಿಸುವ ಉದ್ದೇಶದಿಂದ ಶ್ರೀ ಕೃಷ್ಣನ ವೇಷ ಧರಿಸಿ ನೃತ್ಯ ಪ್ರದರ್ಶನ ಮಾಡಲಾಯಿತು. ಕಲ್ಲಡ್ಕದಿಂದ ಗೊಂಬೆಗಳನ್ನು ತರಿಸಿ ಅದರ ನೃತ್ಯವನ್ನು ನೋಡಲು ಜನಸಾಗರ ನೆರೆದಿತ್ತು.
ಚೆಂಡೆ ಮೇಳ ನಡೆಸಲಾಯಿತು. ಅದರಲ್ಲೂ ವಿಶೇಷವಾಗಿ ಈ ಚೆಂಡೆ ಮೇಳದಲ್ಲಿ ಮಹಿಳೆಯರ ತಂಡವು ಭಾಗವಹಿಸಿತ್ತು. ನಾವು ಯಾರಿಗೂ ಕಮ್ಮಿ ಇಲ್ಲಾ ಎಂಬಂತಹ ಒಂದು ಹುಮ್ಮಸ್ಸಿನಿಂದ ಆ ಮಹಿಳೆಯರ ತಂಡ ಈ ಶ್ರೀ ಕೃಷ್ಣಾಷ್ಟಮಿಯ ಸಂಭ್ರಮಾಚರಣೆಯಲ್ಲಿ ಭಾಗವಹಿಸಿತ್ತು. ಹಾಗೂ ಬ್ಯಾಂಡ್ ಸೆಟ್ ಮೇಳದ ತಂಡಗಳು ಇದರ ಜೊತೆಗೆ ಡಿ.ಜೆ ಸೆಟ್ ನೊಂದಿಗೆ ಈ ಒಂದು ಶೋಭಾಯಾತ್ತೆಯಲ್ಲಿ ಭಾಗಿಯಾಗಿತ್ತು.ಹಾಗೂ ಸಂಭ್ರಮಾಚರಣೆಯ ಕೊನೆಯ ಹಂತದಲ್ಲಿ ಸಭಾಕಾರ್ಯಕ್ರಮ ನಡೆಸಲಾಯಿತು. ಗಣ್ಯವ್ಯಕ್ತಿಗಳ ಉಪಸ್ಥಿತಿಯೊಂದಿಗೆ ಈ ಸಭೆಯನ್ನು ನಡೆಸಲಾಯಿತು. ಹಾಗೂ ವಿವಿಧ ನೃತ್ಯಗಳನ್ನು ಹಾಗೂ ಧಾರ್ಮಿಕ ಸಂದೇಶವನ್ನು ಸಾರುವ ವಿವಧ ಕಾರ್ಯಕ್ರಮಮಗಳೊಂದಿಗೆ ಈ ಸಭೆಯನ್ನು ಕೊನೆಗೊಳಿಸಲಾಯಿತು.