ಹಿರಿಯಡ್ಕ : ಮುಖಾಮುಖಿ ಡಿಕ್ಕಿಯಾದ ಕಾರು ಮತ್ತು ಬೈಕ್

(ನ್ಯೂಸ್ ಕಡಬ) newskadaba.com ಮನಿಪಾಲ, ಆಗಸ್ಟ್.24.ಇಂದು ಬೆಳಗ್ಗೆ ಮಣಿಪಾಲ-ಕಾರ್ಕಳ ರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಕಾರ್ಕಳದಿಂದ ಮಣಿಪಾಲಕ್ಕೆ ಬರುತ್ತಿದ್ದ ಬೈಕ್ ಗೆ ಮಣಿಪಾಲ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

 

ಅತೀ ವೇಗದಲ್ಲಿದ್ದ ಕಾರು ಬ್ರೇಕ್ ಹಾಕಿದ ಪರಿಣಾಮ ಜಾರಿ ಒಂದಷ್ಟು ದೂರ ಸಾಗಿ ಎದುರಿನಿಂದ ಬಂದ ಪಲ್ಸರ್ ಬೈಕ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಬೈಲೂರಿನ ಬೈಕ್ ಸವಾರ ಮಣಿಪಾಲಕ್ಕೆ ಕೆಲಸಕ್ಕೆಂದು ತೆರಳುತ್ತಿದ್ದ ಎನ್ನಲಾಗಿದೆ. ಬೈಕ್ ಸವಾರನನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ಘಟನೆಯ ತೀವ್ರತೆಗೆ ಬೈಕ್ ಮತ್ತು ಕಾರಿನ ಮುಂಭಾಗ ನಜ್ಜು ಗುಜ್ಜಾಗಿದೆ.ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಒಂದು ಕಾಲಿಗೆ ತೀವ್ರ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಕ್ರಿಕೇಟಿಗ ಯುವರಾಜ್ ಸಿಂಗ್ ಅವರ ಬಯೋಪಿಕ್ ಘೋಷಣೆ

 

error: Content is protected !!
Scroll to Top