ನೆಲ್ಯಾಡಿ: ಉಳಿತೊಟ್ಟು ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ .15,  ಇಲ್ಲಿನ ಸಮೀಪದ ಉಳಿತೊಟ್ಟು ಬಿಲಾಲ್ ಜುಮ್ಮಾ ಮಸೀದಿಯಲ್ಲಿ 71ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಪಡುಬೆಟ್ಟು ಸರಕಾರಿ ಪ್ರೌಡ ಶಾಲೆಯ ಅಧ್ಯಾಪಕರಾದ ಎಂ.ಡಿ. ಮಜೀದ್ ಅಲಿ ಇವರು ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷರಾದ ಹಾಜಿ ಯು.ಉಮರಬ್ಬ ಅಧ್ಯಕ್ಷತೆ ವಹಿಸಿದ್ದರು. ಜಮಾಅತ್ ಖತೀಬ್ ಸಿದ್ದೀಕ್ ಸಖಾಫಿ ದುಆ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಡುಬೆಟ್ಟು ಸರಕಾರಿ ಪ್ರೌಢಶಾಲೆಯ ಅಧ್ಯಾಪಕರಾದ ಎಂ.ಡಿ. ಮಜೀದ್ ಅಲಿ ಸಂದೇಶ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ನೆಲ್ಯಾಡಿ ಗ್ರಾ.ಪಂ. ಸದಸ್ಯರಾದ ಶಬ್ಬೀರ್ ಸಾಹೇಬ್, ಉಳಿತೊಟ್ಟು ಅಲ್-ಇಖ್ವಾನ್ ಕಮಿಟಿಯ ಅಧ್ಯಕ್ಷರಾದ ದಾವೂದ್ ಬಿಲಾಲ್, ಸದರ್ ಉಸ್ತಾದ್ ಅಬ್ದುಲ್‌ ಅಝೀಝ್ ಉಸ್ತಾದ್ ಉಪಸ್ಥಿತರಿದ್ದರು.ಅದೇ ರೀತಿ ಕಾರ್ಯಕ್ರಮದಲ್ಲಿ ನೂರುಲ್ ಹುದಾ ಮದ್ರಸದ ವಿದ್ಯಾರ್ಥಿಗಳು, ಜಮಾಅತ್ ಸದಸ್ಯರು, ಅಲ್-ಇಖ್ವಾನ್ ಕಮಿಟಿಯ ಸದಸ್ಯರು ಭಾಗವಹಿಸಿದ್ದರು. ಅಲ್-ಇಖ್ವಾನ್ ಕಮಿಟಿಯ ಕಾರ್ಯದರ್ಶಿ ಸಮೀರುದ್ದೀನ್ ಪಡುಬೆಟ್ಟು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Also Read  ಚಿನ್ನದ ದರದಲ್ಲಿ ಮತ್ತೆ ಏರಿಕೆ

error: Content is protected !!
Scroll to Top