ಭಾರತೀಯ ಜನತಾ ಪಕ್ಷದ ಹಿರಿಯ ಧುರೀಣ ಮತ್ತು ಮಾಜೀ ಹಣಕಾಸು ಸಚಿವ ಅರುಣ್ ಜೇಟ್ಲಿ ವಿಧಿವಶ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆಗಸ್ಟ್.24.66 ವರ್ಷ ಪ್ರಾಯದ ಭಾರತೀಯ ಜನತಾ ಪಕ್ಷದ ಹಿರಿಯ ಧುರೀಣ ಮತ್ತು ಮಾಜೀ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.ಇವರ ಸಾವು ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಜನತಾ ಪಕ್ಷದ ಹಿರಿಯ ನಾಯಕ  ಅರುಣ್ ಜೇಟ್ಲಿ.

ಉಸಿರಾಟ

ದ ಸಮಸ್ಯೆ ಮತ್ತು ವಿಶ್ರಾಂತಿಯ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಗಸ್ಟ್ 9ರಂದು ನಗರದ ಏಮ್ಸ್ ಆಸ್ಪತ್ರೆಗೆ ಸಚಿವ ಅರುಣ್ ಜೇಟ್ಲಿ ದಾಖಲಿಸಲಾಗಿತ್ತು.ಆಸ್ಪತ್ರೆಗೆ ದಾಖಲುಗೊಂಡ ಬಳಿಕ ಜೇಟ್ಲಿ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಾ ಹೋಗಿತ್ತು. ಬಳಿಕ ಅವರನ್ನು ಜೀವರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಮತ್ತು ಅವರ ಆರೋಗ್ಯ ಸ್ಥಿತಿಯನ್ನು ಸುಸಜ್ಜಿತ ವೈದ್ಯರ ತಂಡವೊಂದು ಗಮನಿಸುತ್ತಿತ್ತು. ಆದರೆ ತಜ್ಞ ವೈದ್ಯರ ಸರ್ವ ಪ್ರಯತ್ನಗಳ ಹೊರತಾಗಿಯೂ ಅರುಣ್ ಜೇಟ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

Also Read  ಮಹಿಳೆಯರು ಶಿಕ್ಷಣ ಸ್ವ-ಉದ್ಯೋಗ ಕೈಗೊಂಡು ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸಬೇಕು-ಶಿಲ್ಪ ಎ.ಜಿ

 

 

error: Content is protected !!
Scroll to Top