ದೇಶದೆಲ್ಲೆಡೆ ಸಂವಿಧಾನ ದಿವಸವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ, ➤ ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು ಭಾಷಣ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.24.ದೇಶದೆಲ್ಲೆಡೆ ಸಂವಿಧಾನ ದಿವಸವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ, ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು ಕುರಿತ ಭಾಷಣ ಸ್ಪರ್ಧೆಯನ್ನು ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾಗಿದೆ.


ಭಾಷಣ ಸ್ಪರ್ಧೆಯು ಹಿಂದಿ ಅಥವಾ ಇಂಗ್ಲೀಷ್ ಭಾಷೆಗಳಲ್ಲಿ ಇರಲಿದ್ದು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಜೇತರುಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಿದ್ದು ಅವುಗಳ ವಿವರಗಳು ಇಂತಿವೆ. ಜಿಲ್ಲಾ ಮಟ್ಟ ಪ್ರಥಮ ಬಹುಮಾನ ರೂ 5000/, ದ್ವಿತೀಯ ಬಹುಮಾನ ರೂ 2000/, ತೃತೀಯ ಬಹುಮಾನ ರೂ 1000/, ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ರೂ 25000/, ದ್ವಿತೀಯ ಬಹುಮಾನ ರೂ 10000/, ತೃತೀಯ ಬಹುಮಾನ ರೂ 5000/, ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಹುಮಾನ ರೂ 200000/, ದ್ವಿತೀಯ ಬಹುಮಾನ ರೂ 100000/, ತೃತೀಯ ಬಹುಮಾನ ರೂ 50000/,
ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯನ್ನು ಸಪ್ಟೆಂಬರ್ 14 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಸಂಘಟಿಸುತ್ತಿದೆ.

Also Read  ಚಿರತೆಗೆ ಪ್ರಸವ ವೇದನೆ ➤ ಹೊಟ್ಟೆಯಲ್ಲೆ ಮೃತಪಟ್ಟ ಮರಿಗಳು!

ಇಲ್ಲಿಂದ ಆಯ್ಕೆಗೊಂಡ ಮೂರು ಯುವಜನರು ಸಪ್ಟೆಂಬರ್ 21 ರಂದು ಬೆಳಿಗ್ಗೆ 10.30 ಗಂಟೆಗೆ ವಿಶ್ವವಿದ್ಯಾನಿಲಯ ಕಾಲೇಜು ಸಭಾಂಗಣದಲ್ಲಿ ಜರುಗುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾದವರು ರಾಜ್ಯ ಮಟ್ಟಕ್ಕೆ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಆಯ್ಕೆಯಾದವರು ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ.ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಚಿಸುವ ಆಯಾ ತಾಲೂಕಿನ ಆಸಕ್ತ 18-29 ವಯೋಮಿತಿಯ ಯುವಜನರು ಭಾಗವಹಿಸಲು ಅವಕಾಶ ಕಲ್ಪಿಸಿದೆ.

ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಮತ್ತು ಮೂಡಬಿದ್ರೆ ತಾಲೂಕಿನವರು ನೆಹರೂ ಯುವ ಕೇಂದ್ರ ಮಂಗಳೂರು ದೂರವಾಣಿ ಸಂಖ್ಯೆ : 0824-2422264 ಚಿಂತನಾ, ಮೊಬೈಲ್ ಸಂಖ್ಯೆ 8277417370, ಬಂಟ್ವಾಳ- ಮಂಜುನಾಥ ಉಡುಪ, ಮೊಬೈಲ್ ಸಂಖ್ಯೆ : 9449991611 ಅಕ್ಷಯ, ಮೊಬೈಲ್ ಸಂಖ್ಯೆ 9731677012, ಪುತ್ತೂರು ಮತ್ತು ಕಡಬ- ದಿವಾಕರ ಅಂಚನ್, ಮೊಬೈಲ್ ಸಂಖ್ಯೆ 9980979433 ಆದೇಶ್ ಶೆಟ್ಟಿ, 9901771273, ಬೆಳ್ತಂಗಡಿ- ತೀಕ್ಷಿತ್ ಕುಮಾರ್, ಮೊಬೈಲ್ ಸಂಖ್ಯೆ 8971071342 ಸುಳ್ಯ ಸಂಜೀವ ಕುದ್ಪಾಜೆ, ಮೊಬೈಲ್ ಸಂಖ್ಯೆ 9071987178 ವಿಖ್ಯಾತ್ ಮೊಬೈಲ್ ಸಂಖ್ಯೆ 9480409668 ಇಲ್ಲಿಗೆ ಸಂಪರ್ಕಿಸಬೇಕು ಎಂದು ಮಂಗಳೂರು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ರಘುವೀರ್ ಎಸ್ ಇವರ ಪ್ರಕಟಣೆ ತಿಳಿಸಿದೆ.

Also Read  ಕಡಬ: ಗರ್ಭವತಿಯಾದ ಅಪ್ರಾಪ್ತೆ ➤ ಯುವಕ ಅರೆಸ್ಟ್

error: Content is protected !!
Scroll to Top