(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.23.ಕಲ್ಲುಗುಡ್ಡೆ-ಕಡಬ ಸಂಪರ್ಕ ಕಲ್ಪಿಸುವ ರಸ್ತೆಯ ತೀರಾ ಹದೆಗೆಟ್ಟ ಪೇರಡ್ಕ ರಸ್ತೆಗೆ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರ ಪುನರಾರಂಭಗೊಂಡಿದೆ.
ಕಡಬ ಸಂಪರ್ಕ ರಸ್ತೆಯ ಪೇರಡ್ಕ – ಕಾಯರಡ್ಕ ಜಿ.ಪಂ. ರಸ್ತೆ ತೀರಾ ಹದಗೆಟ್ಟು ಸಂಚಾರಕ್ಕೆ ಕಷ್ಟಪಡುವ ಸ್ಥಿತಿ ಉಂಟಾಗಿತ್ತು, ಇದೀಗ ಈ ರಸ್ತೆಯ ಪೇರಡ್ಕದಿಂದ ಸುಮಾರು 550 ಮೀಟರ್ ದೂರದ ವರೆಗೆ ರಸ್ತೆ ಕಾಂಕ್ರಿಟೀಕರಣಗೊಂಡಿದ್ದು, ಕಾಮಗಾರಿ ಸಂದರ್ಭದಲ್ಲಿ ರಸ್ತೆ ಬಂದ್ ಮಾಡಲಾಗಿತ್ತು, ಇದೀಗ ಕಾಮಗಾರಿ ಪೂರ್ಣಗೊಂಡ ಹಿನ್ನಲೆಯಲ್ಲಿ ಸಂಚಾರ ಪುನರಾರಂಭಗೊಂಡಿದೆ. ರಸ್ತೆ ದುರಸ್ಥಿಗೆ ಮಳೆಹಾನಿ ಯೋಜನೆಯಲ್ಲಿ ಸುಮಾರು 19 ಲಕ್ಷ ರೂ. ಬಿಡುಗಡೆಗೊಂಡಿತ್ತು ಈ ಅನುದಾನದಲ್ಲಿ ಕಾಂಕ್ರಿಟೀಕರಣ ನಡೆಸಲಾಗಿದೆ.
ರೂ. 50 ಲಕ್ಷ ಅನುದಾನ ಇದೆ;
ಈ ರಸ್ತೆಗೆ ದುರಸ್ಥಿಗೆ ಲೋಕೋಪಯೋಗಿ ಇಲಾಖೆಯಿಂದಲೂ ರೂ. 50 ಲಕ್ಷ ಅನುದಾನ ಮಂಜೂರುಗೊಂಡಿತ್ತು, ಆದರೆ ಕಾಮಗಾರಿ ನಡೆಸಲು ಮಳೆ ಅಡ್ಡಿಯಾದ್ದರಿಂದ ಕಾಮಗಾರಿ ನಡೆದಿಲ್ಲ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಮಳೆ ಕಡಿಮೆಯಾದ ತಕ್ಷಣ ರೂ. 50 ಲಕ್ಷ ಅನುದಾನದಲ್ಲಿ ಕಾಯರಡ್ಕ ಜಂಕ್ಷನ್‍ನಿಂದ ಸುಮಾರು 950 ಮೀಟರ್ ವರೆಗೆ ಡಾಮರೀಕರಣ ಕಾಮಗಾರಿ ನಡೆಯಲಿದೆ ಎಂದು ಪುತ್ತೂರು ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.