ಶಕ್ತಿನಗರದ ಶಕ್ತಿ ವಸತಿ ಶಾಲೆ ➤ “ಸಂಸ್ಕೃತವು”ಒಂದು ಪಕ್ವಯುತ ಭಾಷೆ- ಪ್ರೊ.ಜನಾರ್ದನತಾಮ್ಹಾನ್ಕರ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.23.ಸಂಸ್ಕೃತ ಸಹಜವಾಗಿ ಪಕ್ವಯುತ ಹಾಗೂ ಶ್ರೇಷ್ಠವಾದ ಭಾಷೆಯಾಗಿದ್ದು, ಭಾರತೀಯ ಭಾಷೆಗಳಿಗೆಲ್ಲಾ ಮೂಲಾಧಾರವಾಗಿತನ್ನಇರುವನ್ನುಕಾಪಾಡಿಕೊಂಡಿದೆ.

ಪದ್ಯರೂಪದಇದರಲ್ಲಿನಸಾಹಿತ್ಯವುಕಂಠಪಾಠಕ್ಕೆಪೂರಕವಾಗಿದೆ.ವಿದ್ಯಾರ್ಥಿಗಳಜ್ಞಾನಾರ್ಜನೆಗೆಇದುಪೂರ್ಣಸಹಕಾರಿಆಗಿದೆಎಂದುಕರ್ನಾಟಕಆಯುರ್ವೇದಮೆಡಿಕಲ್‍ಕಾಲೇಜಿನಪ್ರೊಜನಾರ್ದನತಾಮ್ಹನ್‍ಕರ್‍ಅವರು ತಿಳಿಸಿದರು. ದಿನಾಂಕ 22.08.2019ರಂದು ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆದ ಸಂಸ್ಕೃತೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು ಶಾಲಾ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.ವಿದ್ಯಾರ್ಥಿಗಳಾದ ಸಲೋನಿ ಹಾಗೂ ಮೆಹಫೂಸ್‍ಅವರು ಸಂಸ್ಕೃತ ಭಾಷೆಯ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಶಾಲಾ ಪ್ರಾಚಾರ್ಯ ವಿದ್ಯಾ ಜಿ ಕಾಮತ್‍ಅವರು “ಸಂಸ್ಕೃತವುಜಗತ್ತಿನ ಶ್ರೇಷ್ಠ ಭಾಷೆಗಳಲ್ಲಿ ಒಂದಾಗಿದೆ” ಎಂದು ಹೇಳಿದರು. ಸಂಸ್ಕೃತ ಶಿಕ್ಷಕ ಶ್ರೀನಿಧಿ ಎ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಕೃತ ಸಾಹಿತ್ಯದಲ್ಲಿಅಗಾಧಜ್ಞಾನಅಡಗಿದೆಎಂದರು.ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ ನಾೈಕ್ ಸಮಾರಂಭದಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಶಕ್ತಿ ಎಜ್ಯುಕೇಶನ್‍ಟ್ರಸ್ಟ್‍ನ ಆಡಳಿತಾಧಿಕಾರಿ ಶ್ರೀ ಬೈಕಾಡಿಜನಾರ್ದನಆಚಾರ್ಯ, ಸಂಸ್ಥೆಯಅಭಿವೃದ್ಧಿಅಧಿಕಾರಿ ನಸೀಂ ಬಾನು, ಪ್ರಧಾನ ಸಲಹೆಗಾರರಮೇಶ್ ಕೆ. ಶಕ್ತಿ ಪಿ.ಯುಕಾಲೇಜಿನ ಪ್ರಾಚಾರ್ಯ ಪ್ರಭಾಕರಜಿ.ಎಸ್ ಉಪಸ್ಥಿತರಿದ್ದರು.

Also Read  ➤ಮಂಗಳೂರು ಹಲವು ಪ್ರಖರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಬಂಧನ

error: Content is protected !!
Scroll to Top