ಪುತ್ತೂರು ತಾ.ಪಂ. ವಾಣಿಜ್ಯ ಕಟ್ಟಡದಲ್ಲಿರುವ ➤ 1ರಿಂದ 9 ವರೆಗಿನ ಕೋಣೆಗಳನ್ನು ಬಾಡಿಗೆಗೆ ಪಡೆಯಲು ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.23.ಪುತ್ತೂರು ತಾಲೂಕು ಪಂಚಾಯತ್‍ನ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡ-2 ರ ನೆಲ ಅಂತಸ್ತಿನಲ್ಲಿ ಕೊಠಡಿ ಸಂಖ್ಯೆ 1 ರಿಂದ 9 ರಲ್ಲಿ ಕೊಠಡಿ ಸಂಖ್ಯೆ 1-ಶೇ.5 ವಿಕಲಚೇತನ, ಕೊಠಡಿ ಸಂಖ್ಯೆ -2 ಮತ್ತು 3ನ್ನು ಶೇ.25 ಪ.ಜಾತಿ ಪ.ಪಂಗಡದವರಿಗೆ ಕಡ್ಡಾಯವಾಗಿ ಮೀಸಲಿರಿಸಿ ಕಾದಿರಿಸಿದ್ದು, ಈ ಕಟ್ಟದ ಕೆಲವು ಕೋಣೆಗಳನ್ನು ಬಾಡಿಗೆಗೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ವಾಣಿಜ್ಯ ಹಾಗೂ ಇತರ ಅಂಗಡಿ ವ್ಯವಹಾರಗಳನ್ನು ನಡೆಸಲು ಬಹಿರಂಗ ಏಲಂ ಮೂಲಕ ಬಾಡಿಗೆ ದರವನ್ನು ನಿಗಧಿಪಡಿಸಿ ಕೋಣೆಗಳನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆಬಿಡ್‍ನಲ್ಲಿ ಆಯ್ಕೆಯಾದವರು ಅಂತಸ್ತು ದೊಡ್ಡ ಕೋಣೆಗೆ ರೂ.1 ಲಕ್ಷ ಮತ್ತು ಚಿಕ್ಕ ಕೋಣೆಗೆ ರೂ.50 ಸಾವಿರ ಠೇವಣಿಯನ್ನು ಠೇವಣಿಯನ್ನು 15 ದಿವಸದ ಒಳಗೆ ಪಾವತಿಸಬೇಕು.ಬಿಡ್‍ನಲ್ಲಿ ಭಾಗವಹಿಸುವವರು ಇ.ಎಂ.ಡಿ ಮೊತ್ತ ರೂ 5000/ ನ್ನು ಪುತ್ತೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಪ್ಟೆಂಬರ್ 20 ರಂದು ಬೆಳಿಗ್ಗೆ 11 ಗಂಟೆಯೊಳಗೆ ಪಾವತಿಸಿ ರಶೀದಿಯನ್ನು ಪಡೆದುಕೊಳ್ಳಬೇಕು.

Also Read  ಕೊಂಬಾರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ➤ ರಬ್ಬರ್ ಕಾರ್ಮಿಕರಿಂದ ಕೆ.ಎಫ್.ಡಿ.ಸಿ ಲಾರಿ ತಡೆಹಿಡಿದು ಪ್ರತಿಭಟನೆ

ಹೆಚ್ಚಿನ ಮಾಹಿತಿಗಾಗಿ ಮತ್ತು ಏಲಂ ಷರತ್ತುಗಳಿಗಾಗಿ ತಾಲೂಕು ಪಂಚಾಯತ್ ಕಚೇರಿಯಲ್ಲಿ, ಕಾರ್ಯನಿರ್ವಾಹಕ ಅಧಿಕಾರಿ ಮೊಬೈಲ್ ಸಂಖ್ಯೆ: 9480862115 ಅಥವಾ ಪ್ರಭಾರ ಸಹಾಯಕ ಲೆಕ್ಕಾಧಿಕಾರಿ/ ಪ್ರಥಮ ದರ್ಜೆ ಸಹಾಯಕರು (ಲೆಕ್ಕ ಶಾಖೆ) ತಾಲೂಕು ಪಂಚಾಯತ್ ಪುತ್ತೂರು ಮೊಬೈಲ್ ಸಂಖ್ಯೆ :9449388399 ಇವರನ್ನು ಸಂಪರ್ಕಿಸಬಹದು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Also Read  ಕಳಾರದಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ ➤10 ಲಕ್ಷ ರೂ. ಅನುದಾನ

error: Content is protected !!
Scroll to Top