(ನ್ಯೂಸ್ ಕಡಬ) newskadaba.comಪುತ್ತೂರು, ಆಗಸ್ಟ್.22.ಪುತ್ತೂರು ತಾಲೂಕು ಪಂಚಾಯತ್ನ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡ-11 ರ ಪ್ರಥಮ (1 ನೇ) ಅಂತಸ್ತಿನಲ್ಲಿ ಕಟ್ಟಡ ಸಂಖ್ಯೆ 1 ರಿಂದ 4 ರವರೆಗೆ ಇರುವ ಕೋಣೆಗಳನ್ನುಬಾಡಿಗೆಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ನೋಂದಣಿಯಾಗಿರುವ ಬ್ಯಾಂಕ್, ಸಹಕಾರಿ ಸಂಘಗಳು, ಮಹಿಳಾ ಸಹಕಾರಿ ಸಂಘ ಹಾಗೂ ಇತರ ಬ್ಯಾಂಕಿಂಗ್ ವ್ಯವಹಾರಗಳನ್ನು ನಡೆಸಲು ಬಹಿರಂಗ ಏಲಂ ಮೂಲಕ ಬಾಡಿಗೆ ದರವನ್ನು ನಿಗದಿಪಡಿಸಿ ಕೋಣೆಗಳನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಬಿಡ್ನಲ್ಲಿ ಆಯ್ಕೆಯಾದವರು ಮೇಲಂತಸ್ತಿನ ದಕ್ಷಿಣ ಭಾಗದ ಕೋಣೆಗೆ ರೂ. 3 ಲಕ್ಷ ಹಾಗೂ ಉತ್ತರ ಭಾಗಕ್ಕೆ ರೂ. 2 ಲಕ್ಷ ಠೇವಣಿಯನ್ನು 15 ದಿವಸದ ಒಳಗೆ ಪಾವತಿಸಬೇಕು.
ಬಿಡ್ನಲ್ಲಿ ಭಾಗವಹಿಸುವವರು ಇ.ಎಂ.ಡಿ ಮೊತ್ತ ರೂ 5000/ ನ್ನು ಪುತ್ತೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಪ್ಟೆಂಬರ್ 20 ರಂದು ಬೆಳಿಗ್ಗೆ 11 ಗಂಟೆಯೊಳಗೆ ಪಾವತಿಸಿ ರಶೀದಿಯನ್ನು ಪಡೆದುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ಮತ್ತು ಏಲಂ ಷರತ್ತುಗಳಿಗಾಗಿ ತಾಲೂಕು ಪಂಚಾಯತ್ ಕಚೇರಿಯಲ್ಲಿ, ಕಾರ್ಯನಿರ್ವಾಹಕ ಅಧಿಕಾರಿ ಮೊಬೈಲ್ ಸಂಖ್ಯೆ: 9480862115 ಅಥವಾ ಪ್ರಭಾರ ಸಹಾಯಕ ಲೆಕ್ಕಾಧಿಕಾರಿ/ ಪ್ರಥಮ ದರ್ಜೆ ಸಹಾಯಕರು (ಲೆಕ್ಕ ಶಾಖೆ) ತಾಲೂಕು ಪಂಚಾಯತ್ ಪುತ್ತೂರು ಮೊಬೈಲ್ ಸಂಖ್ಯೆ :9449388399 ಇವರನ್ನು ಸಂಪರ್ಕಿಸಬಹ್ಮದು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.