ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಗೆಜ್ಜೆಪೂಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.21.ಶ್ರೀನಿವಾಸ್ ವಿಶ್ವವಿದ್ಯಾಲಯದ ಪಾಂಡೇಶ್ವರದಲ್ಲಿರುವ ಸಿಟಿ ಕ್ಯಾಂಪಸ್‍ನ ವಿದ್ಯಾರ್ಥಿಗಳಿಗೆ ಆಯೋಜಿಸಿದ ಭರತನಾಟ್ಯಂ ಸರ್ಟಿಫಿಕೇಟ್ ಕೋರ್ಸಿನ ಗೆಜ್ಜೆಪೂಜೆಯು ಕಾಲೇಜಿನ ಆಡಿಟೋರಿಯಂನಲ್ಲಿ ನಡೆಯಿತು.


ಮುಖ್ಯ ಅತಿಥಿ ಕದ್ರಿ ನೃತ್ಯ ವಿದ್ಯಾನಿಲಯದ ಚಾರಿಟೇಬಲ್ ಟ್ರಸ್ಟ್‍ನ ವಿದ್ವಾನ್ ಯು ಕೆ ಪ್ರವೀಣ್ ಮಾತನಾಡಿ, ನೃತ್ಯವು ಹಿಂದಿನಿಂದ ಬಂದತಂಹ ಕಲೆ. ಭರತಮುನಿಗಳು ಇದನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಗುರುಗಳು ನೀಡಿದ ವಿಧ್ಯೆಯನ್ನು ನಾವು ಜಗತ್ತಿಗೆ ನೀಡಲು ಸಾಧ್ಯವಾಗುತ್ತದೆ. ಕಲೆಯನ್ನು ಯಾರಿಂದಲೂ ಕಸಿಯಲು ಅಸಾಧ್ಯ. ಕಲೆಯಿಂದ ಮನಸ್ಸು, ದೃಷ್ಟಿಯನ್ನು ಹತೋಟಿಯಲ್ಲಿಡಬಹುದು ಎಂದರು.ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ ಎಸ್ ಐತಾಳ್ ಮಾತನಾಡಿ, ಭರತನಾಟ್ಯವೆಂಬುವುದು ದೃಶ್ಯ ಕಾವ್ಯ. ಇಲ್ಲಿ ತಂತ್ರಜ್ಞಾನಕ್ಕಿಂತ ಪ್ರಸ್ತುತಿ, ಅಭಿನಯ, ಪ್ರದರ್ಶನಕ್ಕೆ ಹೆಚ್ಚು ಆಧ್ಯತೆಯನ್ನು ನೀಡಲಾಗುತ್ತದೆ. ಕಲೆಯನ್ನು ಪ್ರಕೃತಿಯಿಂದ ಸುಲಭವಾಗಿ ಕಲಿಯಲು ಸಾಧ್ಯ. ವಿದ್ಯಾರ್ಥಿಗಳು, ಪ್ರಕೃತಿಯನ್ನು ಪ್ರಾರ್ಥಿಸಿ, ಆರಾಧಿಸಬೇಕು ಎಂದರು.

Also Read  ಫೇಸ್‌ಬುಕ್‌ ಬಳಕೆದಾರರಿಗೆ ಕಾದಿದೆ ಬಿಗ್ ಶಾಕಿಂಗ್ ನ್ಯೂಸ್? ಮುಂದಿನ ದಿನಗಳಲ್ಲಿ ನಿಮ್ಮ ಅಕೌಂಟ್ ರದ್ದಾಗಬಹುದು

ಗಣಕ ವಿಜ್ಞಾನ ವಿಭಾಗದ ಡೀನ್ ಫ್ರೊ. ಶ್ರೀಧರ ಆಚಾರ್ಯ ಮಾತನಾಡಿ, ಕಲೆಗೆ ಯಾವುದೇ ನಿರ್ದಿಷ್ಠ ಭಾಷೆ ಎಂಬುವುದಿಲ್ಲ. ಕಲೆಯು ಜೀವನವನ್ನು ರೂಪಿಸುತ್ತದೆ. ಇಂದು ತಂತ್ರಜ್ಞಾನ ಬಹಳಷ್ಟು ಮುಂದುವರಿದ್ದರೂ ಕೆಲವೊಂದು ವಿಧ್ಯೆಯನ್ನು ಗುರುವಿನಿಂದಲೇ ಕಲಿಯಬೇಕು. ನೃತ್ಯ ಮತ್ತು ಸಂಗೀತ ಸಂಸ್ಕøತಿ, ಸಂಸ್ಕಾರವನ್ನು ವಿದ್ಯಾರ್ಥಿ ನೀಡುತ್ತದೆ ಎಂದು ಹೇಳಿದರು.ಈ ಸಂದರ್ಭ ನಟರಾಜನಿಗೆ ಗೆಜ್ಜೆಪೂಜೆಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ವಿದೂಷಿ ಉಪಾ ಪ್ರವೀಣ್, ವಿದೂಷಿ ನಿಶ್ವಿತ ಕರಂದೂರು ಶರಣ್ ಉಪಸ್ಥಿತರಿದ್ದರು. ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಅಂಡ್ ಕಾಮರ್ಸ್‍ನ ಡೀನ್ ಡಾ. ಶೈಲಶ್ರೀ ವಿ.ಟಿ., ಎವಿಯೇಶನ್ ಕೋರ್ಸ್ ಸಂಯೋಜಕಿ ಪವಿತ್ರ ಕುಮಾರಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Also Read  ಹಿರಿಯ ನಟ ಹೆಚ್‍‍ ಜಿ ಸೋಮಶೇಖರ ರಾವ್ ನಿಧನ

error: Content is protected !!
Scroll to Top