(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.21.ಕೃಷಿ ವಿಜ್ಞಾನ ಕೇಂದ್ರ, ಕಂಕನಾಡಿ (ದ.ಕ) ವತಿಯಿಂದ “ಪಾರ್ಥೆನಿಯಂ ಕಳೆ ಸಸ್ಯದ ಜಾಗೃತಿ” ಕಾರ್ಯಕ್ರಮವನ್ನು ಸ್ಕೂಲ್ ಆಫ್ ಸೊಶಿಯಲ್ ವರ್ಕ್ ರೋಶನಿನಿಲಯ ವೆಲೆನ್ಸಿಯದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮ ಸಂಯೋಜಿಸಿದ ಕೃಷಿ ವಿಜ್ಞಾನ ಕೇಂದ್ರ, ಕಂಕನಾಡಿಯ ಮಣ್ಣು ವಿಜ್ಞಾನಿ ಡಾ. ಮಲ್ಲಿಕಾರ್ಜುನ್ ಎಲ್ ರವರು ಮಾತನಾಡಿ ಪಾರ್ಥೇನಿಯಂ ಕಳೆ ಸಸ್ಯದಿಂದಾಗುವ ಬೆಳೆ ಹಾನಿ, ಪಶು ಜಾನುವಾರುಗಳ ಹಾಲಿನ ಗುಣಮಟ್ಟದ ಹಾನಿ, ಚರ್ಮದ ಅಲರ್ಜಿ, ಉಸಿರಾಟದ ತೊಂದರೆ ಹಾಗೂ ಪರಿಸರಕ್ಕಾಗುವ ಇತರ ತೊಂದರೆಗಳನ್ನು ಕುರಿತು ವಿವರಿಸಿದ್ದರು. ಈ ಕಾರ್ಯಕ್ರಮದಲ್ಲಿ ರೋಶನಿ ನಿಲಯದ ವಿದ್ಯಾರ್ಥಿಗಳು, ಪ್ರಾದ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ. ರಶ್ಮಿ, ಡಾ. ಹನುಮಂತ ಡಿ, ಸೌಮ್ಯ ಡಿ.ಕೆ, ದೀಪಾ, ಅಶ್ವಿತ್, ಸೋಮಶೇಕರ್ಕ ವಿಜೇತಾ, ವಿದ್ಯಾವತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.