ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಕಾಮರ್ಸ್, ಶ್ರೀನಿವಾಸ್ ವಿಶ್ವವಿದ್ಯಾನಿಲಯ ➤ ಅಂತರಾಷ್ಟ್ರೀಯ ಕಾನ್ಫರೆನ್ಸ್ ಅಬ್ ಸೃಕ್ಟ ಬಿಡುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.20.ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಅಂಡ್ ಕಾಮರ್ಸ್, ಶ್ರೀನಿವಾಸ್ ವಿಶ್ವವಿದ್ಯಾನಿಲಯ, ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ, ಇನ್ಸ್ಟಿಟ್ಯೂಟ್ ಆಫ್ ಪ್ರೊಡಕ್ಟಿವಿಟಿ ಅಂಡ್ ಅಕಾಡೆಮಿ ಸಹಯೋಗದಲ್ಲಿ ಅಂತರಾಷ್ಟ್ರೀಯ ಕಾನ್ಫರೆನ್ಸ್ ನಗರದ ಹೋಟೆಲ್ ಶ್ರೀನಿವಾಸ್‍ನಲ್ಲಿ ನಡೆಯಿತು.


ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಸಿಎ ರಾಘವೇಂದ್ರರಾವ್ ಉದ್ಘಾಟಿಸಿ ಮಾತನಾಡಿ, ತರಗತಿ ಮತ್ತು ಅನುಭವಗಳಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ವೇಗವಾಗಿ ಪಡೆಯುತ್ತಾರೆ ಇಂಟರ್ನ್ಶಿಪ್ ಮತ್ತು ಅಭ್ಯಾಸಗಳು ವಿದ್ಯಾರ್ಥಿಗಳನ್ನು ವೃತ್ತಿ ರಂಗದಲ್ಲಿ ಮಿಂಚಲು ಅಪಾರ ಅವಕಾಶಗಳನ್ನು ನೀಡುತ್ತದೆ ಎಂದರು.ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್ ಡಾ. ವೈ ಎಸ್ ಸಿದ್ದೇಗೌಡ ಮಾತನಾಡಿ, ಎಲ್.ಪಿ.ಜಿ. ಯುಗವು ಹಲವಾರು ಬದಲಾವಣೆಗಳನ್ನು ತಂದಿದೆ. ನಿರ್ವಹಣೆಯ ಪ್ರಕೃತಿಯನ್ನು ಗಮನಿಸಿದರೆ, ವಿಶ್ವದರ್ಜೆಯ ಬೆಂಚ್ ಮಾರ್ಕ್‍ಗಳು, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್‍ಗಳು ಉದ್ಯೋಗಿಗಳ ವಿಶ್ಲೇಷಣೆಗೆ ಒಂದು ಉತ್ತಮ ಉದಾಹರಣೆಗಳಾಗಿವೆ ಎಂದರು.

Also Read  ಸುರತ್ಕಲ್: ವಿದ್ಯಾರ್ಥಿಗೆ ಚೂರಿ ಇರಿದು ಪರಾರಿಯಾದ ದುಷ್ಕರ್ಮಿಗಳು

ಸೆಂಟ್ರಲ್ ಯೂನಿವರ್ಸಿಟಿ ಆಫ್ ಕೇರಳಾದ ಕುಲಪತಿ ಪ್ರೊ. ಡಾ. ಜಿ ಗೋಪಕುಮಾರ್ ಮಾತನಾಡಿ, 21ನೇ ಶತಮಾನವನ್ನು ಜ್ಞಾನ ಆರ್ಥಿಕತೆ ಮತ್ತು ಜ್ಞಾನ ಸಮಾಜ ಎಂದು ಕರೆಯಲಾಗುತ್ತದೆ. ಈ ಜಗತ್ತಿನಲ್ಲಿ ನಮಗೆ ಬೇಕಾಗಿರುವುದು ಜ್ಞಾನ. ನಮಗೆ ಹಲವಾರು ರೀತಿಯ ಸವಾಲುಗಳಿವೆ.ಮಾಹಿತಿ ತಂತ್ರಜ್ಞಾನ ಪರಮಾಣು ಸಂಶೋಧನೆ ಬಾಹ್ಯಾಕಾಶ ಸಂಶೋಧನೆ ಡಿಜಿಟಲ್ ಕ್ರಾಂತಿ ಮೊದಲಾದ ವಿಷಯಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ನಾವು ಬೆಳೆಯಲು ನಮ್ಮಲ್ಲಿ ಎಲ್ಲಾ ರೀತಿಯ ಅವಕಾಶಗಳಿವೆ.ವೆಂಚರ್ಸ್ ಆಫ್ ಗ್ಲೋಬಲ್ ಕ್ಯಾಲಿಫೊರ್ನಿಯ ಯುಎಸ್‍ಎಯ ಅಧ್ಯಕ್ಷ ವೆಂಕಟ್ ಎ ಭಟ್ ಮಾತನಾಡಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯವು ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ವಿದ್ಯಾರ್ಥಿಗಳನ್ನು ಹಾಗೂ ಅವರ ಭವಿಷ್ಯವನ್ನು ರೂಪಿಸುವ ವೇದಿಕೆ.

ಹೊಸ ವಿಧಾನಗಳನ್ನು ನಿರ್ವಹಿಸಲು ತಿಳಿದಿದ್ದರೆ ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ ಎಂದರು.ಈ ಸಂದರ್ಭ ವೇದಿಕೆಯಲ್ಲಿ ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಐತಾಳ್, ಕುಲಸಚಿವ ಡಾ. ಅನಿಲ್ ಕುಮಾರ್ ಉಪಸ್ಥಿತರಿದ್ದರು.ಈ ಸಂದರ್ಭ ಅಂತರಾಷ್ಟ್ರೀಯ ಕಾನ್ಫರೆನ್ಸ್ ಅಬ್ ಸೃಕ್ಟ ಬಿಡುಗಡೆ ಮಾಡಲಾಯಿತು.ಕಾನ್ಫರೆನ್ಸ್‍ನಲ್ಲಿ ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು ತಮ್ಮ ಸಂಶೋಧನ ಪತ್ರಿಕೆಗಳನ್ನು ಪ್ರಸ್ತುತಪಡಿಸಿದರು. 200ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಸ್ವೀಕರಿಸಲಾಯಿತು. ಈ ಕಾನ್ಫರೆನ್ಸ್‍ನಲ್ಲಿ ಪ್ರಸ್ತುತಪಡಿಸಿದ ಎಲ್ಲಾ ಸಂಶೋಧನಾ ವರದಿಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಶೀಲಿಸಿದ ನಂತರ ಐ.ಎಸ್.ಬಿ.ಎನ್ ಜರ್ನಲ್‍ನಲ್ಲಿ ಪ್ರಕಟಿಸಲಾಗುತ್ತದೆ.

Also Read  ಗೋಕರ್ಣದಲ್ಲಿ ಹೊಂಡಕ್ಕೆ ಬಿದ್ದ ಕಾರು ➤ ಓರ್ವ ಮೃತ್ಯು..!!

error: Content is protected !!
Scroll to Top