ಜಂಟಿ ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ➤ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.20.ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು,  ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸಿಕೊಡಲು ಹಾಗೂ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಮತ್ತು ಕೃಷಿ ಉತ್ಪನ್ನಗಳು ಪೋಲಾಗುವುದನ್ನು ತಡೆಯಲು ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಪ್ರೋತ್ಸಾಹಧನ ನೀಡಲಾಗುವುದು.


CFTRI/ IIMR /ICRISAT /NIFTEM/ DFRL ಸಂಸ್ಥೆಗಳ ತಂತ್ರಜ್ಞಾನ ಅಳವಡಿಸಿ ತಯಾರಿಸಲಾದ ಯಂತ್ರೋಪಕರಣಗಳಿಗೆ ಪ್ರೋತ್ಸಾಹಧನ ನೀಡಲಾಗುವುದು. ಈ ಕಾರ್ಯಕ್ರಮದಡಿ ಅರ್ಹ ನವೋದ್ಯಮಿಗಳು, ರೈತ ಸಂಘಗಳು, ನೊಂದಾಯಿತ ಸ್ವ-ಸಹಾಯ ಗುಂಪುಗಳು, ರೈತ ಉತ್ಪಾದಕರ ಸಂಸ್ಥೆಗಳು (FPOs), ಖಾಸಗಿ ಉದ್ದಿಮೆದಾರರು, ಸಾರ್ವಜನಿಕ ವಲಯ ಘಟಕಗಳು, ಜಂಟಿ ವಲಯ ಘಟಕಗಳು ಮತ್ತು ಆಹಾರ ಘಟಕಗಳ ಸ್ಥಾಪನೆ ಅಥವಾ ವಿಸ್ತರಣೆ ಅಥವಾ ಆಧುನಿಕರಣ ಉದ್ದಿಮೆಯಲ್ಲಿ ಕಾರ್ಯನಿರತರು ಈ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಅರ್ಹರಾಗಿರುತ್ತಾರೆ. ನವೋದ್ಯಮಿಗಳಿಗೆ ಹಾಗೂ ನೂತನವಾಗಿ ಆರಂಭಿಸಲಿರುವ ಉದ್ದಿಮೆಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.

ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಯೋಜನೆಯ ಪ್ರಸ್ತಾವನೆಯ ಒಟ್ಟು ವೆಚ್ಚದ ಮೇಲೆ ಪ್ರೋತ್ಸಾಹಧನವಾಗಿ ಎಲ್ಲಾ ವರ್ಗದವರು ಶೇ.50ರಷ್ಟು ಅಥವಾ ಗರಿಷ್ಠ ರೂ. 10.00 ಲಕ್ಷಗಳವರೆಗೆ ಪಡೆಯಬಹುದಾಗಿರುತ್ತದೆ. ಯೋಜನಾ ಪ್ರಸ್ತಾವನೆಯ ಒಟ್ಟು ಮೊತ್ತವು ರೂ. 5.0 ಲಕ್ಷಗಳಿಗಿಂತ ಹೆಚ್ಚಾಗಿದ್ದಲ್ಲಿ ನೆರವು ಕೋರುವ ಅರ್ಜಿದಾರರು ಘಟಕ ಸ್ಥಾಪನೆ /ಉನ್ನತೀಕರಣ/ಆಧುನೀಕರಣ ಉದ್ದೇಶಕ್ಕಾಗಿ ಯಾವುದಾದರೂ ರಾಷ್ಟ್ರೀಕೃತ/ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಿಂದ ಕಡ್ಡಾಯವಾಗಿ ಸಾಲ ಪಡೆದಿರಬೇಕು.

Also Read  ಉಡುಪಿ: ನಿಲ್ಲಿಸಿದ್ದ ಕಾರಿಗೆ ರಿಕ್ಷಾ ಢಿಕ್ಕಿ ➤ ಆಟೋ ಚಾಲಕ ಮೃತ್ಯು


ಫಲಾನುಭವಿಗಳು ಸಲ್ಲಿಸಬೇಕಾದ ದಾಖಲೆಗಳು: ನಿಗದಿತ ನಮೂನೆಯ ಅರ್ಜಿ, ಯೋಜನೆಯ ವಿವರ ವರದಿ, ಬ್ಯಾಂಕ್/ಹಣಕಾಸು ಸಂಸ್ಥೆಯ ಘಟಕ ಸ್ಥಾಪನೆಗೆ ಸಾಲ ಮಂಜೂರಾತಿ ಪತ್ರ, ಬ್ಯಾಂಕ್/ಹಣಕಾಸು ಸಂಸ್ಥೆಯ ಮೌಲ್ಯ ನಿರ್ಧಾರ ವರದಿ, ಇನ್‍ಕಾರ್ಪೊರೇಶನ್/ ನೋಂದಣಿ ಪ್ರಮಾಣ ಪತ್ರ, ಮೆಮೋರೆಂಡಮ್ ಮತ್ತು ಸಂಸ್ಥಾ ನಿವೇದನಾ ಪತ್ರ (ಆರ್ಟಿಕಲ್ಸ್‍ಆಫ್. ಅಸೋಸಿಯೇಷನ್) ಹಾಗೂ ಸೊಸೈಟಿ ಬೈಲಾಗಳು (ಇದ್ದ ಪಕ್ಷದಲ್ಲಿ)/ ಪಾಲುದಾರಿಕೆ ಪತ್ರ, ಇತರೆ, ವ್ಯಕ್ತಿ ವಿವರಗಳು/ ಕಚೇರಿ ನಿರ್ವಾಹಕರ ಹಿನ್ನೆಲೆ/ ಸಂಸ್ಥೆಯ ಪ್ರೋತ್ಸಾಹಕರು, ವಿಸ್ತರಣೆ/ಉನ್ನತೀಕರಣ/ಆಧುನೀಕರಣ ಪ್ರಸ್ತಾವನೆಗಳಾಗಿದ್ದಲ್ಲಿವಾರ್ಷಿಕ ವರದಿಗಳು, ಕಳೆದೆರಡು ವರ್ಷದ ಲೆಕ್ಕ ಪರಿಶೋಧನಾ ವರದಿಗಳು, ಕಟ್ಟಡ ನೀಲಿ ನಕಾಶೆಯ ನಕಲು.

ನೋಟರಿಯ ಮುಂದೆ ಪ್ರಮಾಣೀಕರಿಸಿದ ಆಂಗ್ಲ ಭಾಷಾಂತರದ ಭೂಮಿಯ ದಾಖಲೆಗಳು (ಒಂದು ಪಕ್ಷ ಪ್ರಾದೇಶಿಕ ಭಾಷೆಯಲ್ಲಿದ್ದಲ್ಲಿ). ಸನ್ನದು ಪಡೆದ ಮೆಕ್ಯಾನಿಕಲ್ ಇಂಜಿನಿಯರ್‍ರವರಿಂದ ಪ್ರಮಾಣೀಕರಿಸಿದ ಘಟಕ ಮತ್ತು ಯಂತ್ರಗಳ ವಿವರ. ಪ್ರಸ್ತಾಪಿಸಿದ ಯೋಜನೆಗೆ ಬೇಕಾದ ಅವಶ್ಯ ಸ್ಥಾವರ ಮತ್ತು ಯಂತ್ರಗಳ ಹಾಗೂ ಸಲಕರಣೆ ಇತರೆಗಳ ಬಗ್ಗೆ ಸರಬರಾಜುದಾರರ ದರಪಟ್ಟಿ. ಮಾರಾಟ ಕಾರ್ಯೋಪಾಯಗಳು ಕಾರ್ಯವಿಧಾನದ ಹಂತಗಳನ್ನು ಸೂಚಿಸುವ ರೇಖಾಚಿತ್ರ (flow diagram) ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಂದ ಮೂಲಭೂತ ಸೌಕರ್ಯ ವ್ಯವಸ್ಥೆಗೆ ಪಡೆದ ಪರವಾನಿಗೆ ರೂ.100 ಮೌಲ್ಯದ ಛಾಪಾಕಾಗದದಲ್ಲಿ ನೋಟರಿಯ ಮುಂದೆ ಧೃಢೀಕರಿಸಿದ ‘ಅಫಿಡವಿಟ್’.

Also Read  ಭಾರತೀಯ ಹವಾಮಾನ ಇಲಾಖೆ ➤ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ!

ಈ ಯೋಜನೆಯಡಿಯಾವ ಘಟಕಗಳಿಗೆ ಪ್ರೋತ್ಸಾಹಧನವನ್ನು ಪಡೆಯಲಾಗಿದೆಯೋ ಆ ಘಟಕಗಳನ್ನು ಕನಿಷ್ಠ 5 ವರ್ಷಗಳ ಕಾಲ ನಿರಂತರವಾಗಿ ಚಾಲನೆಯಲ್ಲಿಡುವ ಬಗ್ಗೆ ಮುಚ್ಚಳಿಕೆ ಹಾಗೂ ಸರ್ಕಾರದಿಂದ ಪಡೆದ ಪ್ರೋತ್ಸಾಹಧನದ ದುರುಪಯೋಗವಾದಲ್ಲಿ ಸೂಕ್ತ ಕಾನೂನು ಕ್ರಮಜರುಗಿಸಲು ಇಲಾಖೆಗೆ ಅಧಿಕಾರ ನೀಡುವ ಬಗ್ಗೆ ಮುಚ್ಚಳಿಕೆ ಪತ್ರ. ಪ್ರಸ್ತಾವಿತ ಘಟಕಗಳ ಅನುಷ್ಠಾನಕ್ಕಾಗಿ ಸಂಬಂಧಿತ ಇತರೇ ಇಲಾಖೆಗಳಿಂದ ಯಾವುದೇ ರೀತಿಯ ನೆರವು ಪಡೆದಿರುವುದರ ಬಗ್ಗೆ ಆಕ್ಷೇಪಣಾ ರಹಿತ ಪತ್ರ.(ಎನ್.ಓ.ಸಿ) ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಹೋಬಳಿ ರೈತ ಸಂಪರ್ಕ ಕೇಂದ್ರ/ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು/ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top