ಇಂದು ಸದ್ಭಾವನಾ ದಿನ ಆಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.20.ಎಲ್ಲಾ ಧರ್ಮ, ಭಾಷೆ ಹಾಗೂ ರಾಜ್ಯಗಳ ಸೌಹಾರ್ದತೆಯನ್ನು ಮೂಡಿಸಿ ಹಿಂಸಾಚಾರವನ್ನು ತ್ಯಜಿಸುವಂತೆ ಮಾಡಲು ಕೇಂದ್ರ ಸರ್ಕಾರದ ಆದೇಶದಂತೆ ಪ್ರತಿ ವರ್ಷ ಆಗಸ್ಟ್ 20 ರಂದು ಅಂದರೆ ಇಂದು “ಸದ್ಭಾವನಾ ದಿನ” ಆಚರಿಸಲಾಗುತ್ತದೆ.

ಆದುದರಿಂದ ಈ ಬಾರಿಯು  ಸದ್ಭಾವನಾ ದಿನವನ್ನು ಆಚರಿಸಲು ಭಾರತ ಸ್ಕೌಟ್ಸ್ ಆಂಡ್ ಗೈಡ್ಸ್ ಮತ್ತು ಯೂತ್ ಅಸೋಸಿಯೇಷನ್ ಸಹಕಾರದೊಂದಿಗೆ ರಾಜ್ಯದ ವಿಭಾಗ, ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿ ಸದ್ಭಾವನಾ ದಿನವನ್ನು ಆಚರಿಸುವುದರೊಂದಿಗೆ ಪ್ರತಿಜ್ಞೆಯನ್ನು ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Also Read  ದ.ಕ, ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಕಡಬ ವಲಯದ ಪದಾಧಿಕಾರಿಗಳ ಆಯ್ಕೆ

error: Content is protected !!
Scroll to Top