ನೆರೆಯಿಂದ ಮನೆ ಹಾನಿಯಾದ ಸಿಬ್ಬಂದಿಗೆ ಸಹಾಯ ಹಸ್ತ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.20.ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಗೃಹರಕ್ಷಕದಳ ಬೆಳ್ತಂಗಡಿ ಘಟಕದ ಗೃಹರಕ್ಷಕದಳ ಸಿಬ್ಬಂದಿ ಧರ್ಮಸ್ಥಳ ಠಾಣೆಯಲ್ಲಿ ಗೃಹರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಾಕ್ಷ ಎಂಬವರು ಹೊಸದಾಗಿ ನಿರ್ಮಿಸಿರುವ ಮನೆ ಭಾರೀ ಮಳೆಯಿಂದಾಗಿ ನೆರೆ ಬಂದ ಹಿನ್ನೆಲೆಯಲ್ಲಿ ಭಾಗಶ: ಹಾನಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಆಗಸ್ಟ್ 8 ರಂದು ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಠರಾದ ಡಾ. ಮುರಲೀ ಮೋಹನ್ ಚೂಂತಾರು ಹಾಗೂ ಉಪ ಸಮಾದೇಷ್ಠರಾದ ರಮೇಶ್ ರವರು ಭೇಟಿ ನೀಡಿ ಜಿಲ್ಲಾ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಸಂಗ್ರಹಿಸಿದ 11,111/- ನಗದು ಹಣ ಹಾಗೂ 25 ಕೆ.ಜಿ. ಅಕ್ಕಿಯನ್ನು ಸಂತ್ರಸ್ತ ಶಿವಾಕ್ಷ ರವರಿಗೆ ಅವರ ಬೆಳ್ತಂಗಡಿ ಸಮೀಪದ ನಿವಾಸದಲ್ಲಿ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಹಾಗೂ ಉಪ ಸಮಾದೇಷ್ಠರಾದ ರಮೇಶ್ ಹಾಗೂ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Also Read  ರಾಜ್ಯಮಟ್ಟದ ಅಥ್ಲೆಟಿಕ್ಸ್‍ ನಲ್ಲಿ ಶಕ್ತಿ ವಿದ್ಯಾರ್ಥಿಗಳಿಗೆ ಪದಕಗಳು..!

error: Content is protected !!
Scroll to Top