(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.19. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ದೋಂತಿಲಡ್ಕ ಬಾಬು ರವರ ಮನೆಯಲ್ಲಿ ನೂಜಿಬಾಳ್ತಿಲ ಬೀಟ್ ಪೋಲಿಸರ ಸಭೆ ಆದಿತ್ಯವಾರ ನಡೆಯಿತು.
ಕಡಬ ಪೊಲೀಸ್ ಠಾಣಾ ಹೆಡ್‍ಕಾನ್ಸ್‍ಸ್ಟೇಬಲ್, ನೂಜಿಬಾಳ್ತಿಲ ಬೀಟ್ ಅಧಿಕಾರಿ ಕೆ. ಚಿನ್ನಪ್ಪರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಮ್ಮ ಯಾವುದೇ ಸಮಸ್ಯೆಗಳಿದ್ದಲ್ಲಿ ತಕ್ಷಣ ನನಗೆ ಅಥವಾ ದಲಿತ ಮುಖಂಡರಿಗೆ ತಿಳಿಸಿದಲ್ಲಿ ಕ್ರಮಕೈಗೊಳ್ಳಲಾಗುವುದು, ಮಧ್ಯಪಾನದಿಂದ ದೂರವಿರುವಂತೆ ಸಲಹೆ ನೀಡಿದ ಅವರು, ಕುಡಿತದ ಚಟದಿಂದ ಮನೆಯ ನೆಮ್ಮದಿ ಕೆಡುವುದರೊಂದಿಗೆ, ತಮ್ಮ ಮಕ್ಕಳ ಭವಿಷ್ಯಕ್ಕೆ ಹೊಡೆತ ಬೀಳಲಿದೆ ಎಂದ ಅವರು, ಕುಡಿತ ಬಿಟ್ಟ ಎಷ್ಟೋ ಮಂದಿ ಇಂದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿದ್ದಾರೆ ಎಂದರು.
ಕಡಬ ತಾಲೂಕು ಡಿ.ಎಸ್.ಎಸ್. ಮಹಿಳಾ ಸಂಘದ ಅಧ್ಯಕ್ಷೆ ಸುಂದರಿ ಕಲ್ಲುಗುಡ್ಡೆ ಮಾತನಾಡಿ, ನಮ್ಮ ಪ್ರತಿಯೊಂದು ಕಾಲೋನಿಯಲ್ಲಿರುವ ದಲಿತ ಸಮುದಾಯ ಮಧ್ಯ ವ್ಯಸನಿದಿಂದ ದೂರವಾಗಿ ಉತ್ತಮ ಸಮಾಜ ನಿರ್ಮಾಣದೊಂದಿಗೆ ಎಲ್ಲರೂ ಸಕುಟುಂಬಿಗಳಾಗಿ ಮುನ್ನಡೆಯಬೇಕೆಂದ ಅವರು ಮುಂದೆ ನಡೆಯುವ ಸಭೆಗೆ ಠಾಣಾಧಿಕಾರಿಯೂ ಬರುವಂತೆ ಕೇಳಿಕೊಂಡರು. ದೋಂತಿಲಡ್ಕ ರಸ್ತೆ ಬದಿಯ ಹಾಗೂ ಗುರ್ಬಿರವರ ಮನೆ ಹತ್ತಿರ ಇರುವ ಅಪಾಯಕಾರಿ ಮರ ತೆರವುಗೊಳಿಸುವಂತೆ, ಕಾಲೋನಿ ಬಳಿ ಮಧ್ಯದ ಬಾಟಲಿಗಳನ್ನು ಹಾಕುತ್ತಿದ್ದು ಇದರ ಬಗ್ಗೆ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಆಗ್ರಹಗಳು ವ್ಯಕ್ತವಾಯಿತು.
ದಲಿತ ಮಹಾ ಒಕ್ಕೂಟಗಳ ಕಡಬ ತಾಲೂಕು ಸಂಚಾಲಕ ವಸಂತ ಕುಬಲಾಡಿ, ಪತ್ರಕರ್ತ ಖಾದರ್ ಸಾಹೇಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತೀಶ್, ಪುತ್ರ ನಿಡ್ಡೋ, ಕಾವ್ಯ ದೋಂತಿಲಡ್ಕ, ಅಂಗಾರು ದೋಂತಿಲಡ್ಕ, ಶೋಭಾ, ಪೂವಮ್ಮ, ಕಮಲ, ವಿಜಯ, ರಮಾ, ಕುಶಲ, ಗುರ್ಬಿ, ಉದಯ ಕಲ್ಲುಗುಡ್ಡೆ ಸೇರಿದಂತೆ ಕಾಲೋನಿಯ ಜನರು ಸಭೆಯಲ್ಲಿ ಪಾಲ್ಗೊಂಡು ಚರ್ಚೆಯಲ್ಲಿ ಪಾಲ್ಗೊಂಡರು. ದಲಿತ ಮುಖಂಡೆ ಸುಂದರಿ ಸ್ವಾಗತಿಸಿ, ಕುಶಲ ದೋಂತಿಲಡ್ಕ ವಂದಿಸಿದರು.